ಅನುದಿನ‌ ಕವನ-೧೪೭೨, ಕವಿ: ರಘೋತ್ತಮ‌ ಹೊ ಬ, ಮೈಸೂರು, ಕವನದ ಶೀರ್ಷಿಕೆ: ಬಸ್ಸು

ಬಸ್ಸು

ಬಸ್ಸಲ್ಲಿ ಕುಳಿತ ನಮ್ ಜನ
ಹೇಗೊ ಅಡ್ಜಸ್ಟ್‌ ಮಾಡ್ಕೊತಾರೆ
ಮಾಡಿಕೊಂಡು ಸಮಾಧಾನ
ಒಬ್ಬರ ಮೇಲೆ ಒಬ್ಬರು ಕುಳಿತುಕೊಂಡು
ಮೂರ್ರಲ್ಲಿ ನಾಲಕ್ ಕುಳಿತುಕೊಂಡು
ಡ್ರೈವರ್ ಪಕ್ಕದ ನೆಲವನ್ನು ಬಿಡದೆ
ಹೇಗೊ ಹೋಯ್ತಾರೆ ಸಾವಧಾನ

ಇಲ್ಲಿ ಸೀಟು ಸಿಕ್ಕವನೆ ರಾಜ
ನಿಂತುಕೊಂಡವನೆ ಸೇವಕ
ಒತ್ತರಿಸಿಕೊಂಡು ನಿಂತವನು ಕಾಮಕ
ಒತ್ತರಿಸಿಕೊಂಡವಳು ಪ್ರೇಮಕ
ಹೇಗೋ ಬಗೆ ಬಗೆಯಲ್ಲಿ ಮನುಷ್ಯ ಅನುಭವಗಳನ್ನು ಪಡೆದು
ಪ್ರಯಾಣ ಹತ್ತಿಹರು ಪ್ರಯಾಸಕ
ಇಲ್ಲ ಪ್ರವಾಸಕ

ಬದುಕೊಂದು ಬಸ್ಸಿನ ಪ್ರಯಾಣ
ಕಿವಿಗೆ ಸಿಕ್ಕಿಸಿಕೊಂಡವನೆ ಇಲ್ಲಿ
ನೆಮ್ಮದಿಯವನು ಎಂದು ಹೇಳಬೇಕು
ಈ ಜೀವಕ
ಸ್ಟಾಪು ಬಂದು ನಂತರ ಇಳಿದು ಹೋದವನು
ಎತ್ತ ಹೋದನು
ಎರಡರಲ್ಲೊಂದು
ಬದುಕಕ
ಇಲ್ಲ ಸಾಯಕ

-ರಘೋತ್ತಮ ಹೊ.ಬ, ಮೈಸೂರು
—–