ಹೊಸ ಹಾದಿಯಲ್ಲೂ…
ಎಷ್ಟೊಂದು ಪರಿಚಿತ ಮುಖಗಳ ನಡುವೆ
ಅಪರಿಚಿತವೂ ಸೇರಿ ಹೋಗುತ್ತಿದೆ
ಕೆಲವರು ಸದ್ದಿರದೆ ವಿದಾಯ ಹೇಳಿದ್ದಾರೆ
ಹಲವರು ಸುಮ್ಮನೆ ಗದ್ದಲವೆಬ್ಬಿಸುತ್ತಿದ್ದಾರೆ
ಇಲ್ಲೊಂದು ಕನಸಿನ ಮನೆ ಏಳುತ್ತಿದೆ
ಅಲ್ಲೊಂದು ಆಗಲೋ ಈಗಲೋ ಎನ್ನುತ್ತಿದೆ
ದಾರಿಯ ಕೊನೆಯೇ ಮೊದಲೆನ್ನುವವರು
ಮೊದಲನ್ನೇ ಕೊನೆಯೆನ್ನುವವರ ಗೋಜಲು
ಹೊಸ ಕಥೆಗಳ ಬರೆಯುತ್ತಿರುವವರ ನಡುವೆ
ಬರೆದು ಮುಗಿಸಿದವರ ಕತೆ ತಬ್ಬಲಿಯಾಗಿದೆ
ರೋಚಕ ತಿರುವು, ಪಾತ್ರಗಳ ನಡುವೆ ಇಲ್ಲೊಬ್ಬಳು
ಮಲ್ಲಿಗೆಯ ಗಂಧ ಅರಸಿ ಅಲೆಯುತ್ತಿದ್ದಾಳೆ!
-ಎಂ. ಆರ್ . ಕಮಲ, ಬೆಂಗಳೂರು
—–