ಕಾಯಬೇಕು
ಚೊಲೊದ್ದು ,
ಲಗೂನ ಸಿಗಂಗಿಲ್ಲ್ಯಾಕ?
ಕೆಟ್ಟದ್ದು ,
ಲಗೂನ ಸಿಗತೈತ್ಯಾಕ?
ದೊಡ್ಡಮನಿ,
ಲಗೂನ ಸಿಗಂಗಿಲ್ಲ್ಯಾಕ?
ಫೂಟ್ಪಾತ್,
ಲಗೂನ ಸಿಗತೈತ್ಯಾಕ?
ಊಟ,
ಲಗೂನ ಸಿಗಂಗಿಲ್ಲ್ಯಾಕ?
ಕುರುಕಲು,
ಲಗೂನ ಸಿಗತೈತ್ಯಾಕ?
ಚಂದನಮೈ,
ಲಗೂನ ಸಿಗಂಗಿಲ್ಲ್ಯಾಕ?
ಕೆರಕೊಳಾಕ ತಿಂಡಿ,
ಲಗೂನ ಸಿಗತೈತ್ಯಾಕ?
ಸುಂದರಿ,
ಲಗೂನ ಸಿಗಂಗಿಲ್ಲ್ಯಾಕ?
ಕುರೂಪಿ,
ಲಗೂನ ಸಿಗತಾಳ್ಯಾಕ?
ಕೈಯಾಗಕೂಸು,
ಲಗೂನ ಸಿಗಂಗಿಲ್ಲ್ಯಾಕ?
ಕೈಗೆಲಾಸು,
ಲಗೂನ ಸಿಗತೈತ್ಯಾಕ?
ಕಾಯಬೇಕು,
ಚಂದಾಗಿ ಚೊಲಾದಕ್ಕ?
ಕಾಯೋದೇನೂ ಬ್ಯಾಡ,
ಕೆಟ್ಟದ್ದಕ್ಕ ಹಾಳಾಗೋಗಾಕ್ಕ?
-ಮನಂ(ಎಂ. ನಂಜುಂಡಸ್ವಾಮಿ), ಬೆಂಗಳೂರು
—–