ಋತುಗಳ ರಾಣಿ…
ಮರೆತಂತೆ ನಟಿಸೋದು ಚೆನ್ನ
ನಿನ್ನ ನಗೆ ನನ್ನೊಳಗೆ ನೂರಾರು ಬಣ್ಣ
ನೋಡುತ್ತ ನೀ ಹಾಗೆ ನನ್ನ
ತುಂಬಿ ಹೋಗಿರುವೆ ಈ ನನ್ನ ಕಣ್ಣ
ನಿನ್ನದೆ ಬಿಂಬ ಸಾಲು ಮೂಡಿದೆ ಗಾಳಿ ಕೆನೆ ಪದರು
ಋತುಗಳ ರಾಣಿ ಅಳಿಸಲಾರೆ ಇನ್ನೂ ಹೃದಯದಿ ನಿನ್ನೇಸರು..
ಚಂದಿರ ತುಂಬುನಗೆ
ನಿನ್ನ ಮೊಗ ಮುಗಿಲಿಗೆ
ಬೆಳ್ದಿಂಗ್ಳ ಹರಿಸಿ ನಿಂತ ನೀ ನಡೆವ ದಾರಿಗೆ
ತೂಗುವ ತಂಗಾಳಿ
ಚಂದವೆ ಚಳಿಗಾಳಿ
ವೈಯಾರಿ ನೀನಂತು ನೂತನ ಕನಸೊಂದರ ರೂಪಸಿ
ಚಿಗುರಿದ ಕನಸಿಗೆ ಮುಂಗುರುಳಾಗುವ
ಇರುಳಾದ ನೀಲಿಯಲ್ಲಿ ಕಡಲಾಗುವ…
ದಿನವಹಿ ಹಾಜರಾತಿ
ಹಾಕಿ ಬಂದೆ ಸನಿಹ
ಬೆರಳೊಂದು ತಾಕಲು ಹೇಳೋದು ಹೇಗೆ ಎದೆ ಮಿಡಿತ
ನಿನಗಾಗೆ ಮಲ್ಲಿಗೆ
ಅರಳಲು ಸಂಪಿಗೆ
ಮಿಂಚು ಸಂಚಿನ ನೋಟ ಅರಿಯದೆ ವಶವಾದೆ ನಾನೀಗ
ಮಾಯಾವಿ ಕೆನ್ನೆಯಲ್ಲಿ ರಂಗಿಳಿಯುವ
ಮೋಹಕತೆ ನಾನೀಗ ಶರಣಾಗುವ….
-ಸಿದ್ದು ಜನ್ನೂರ್, ಚಾಮರಾಜ ನಗರ
—–