ಅನುದಿನ ಕವನ-೧೫೦೬, ಕವಿ: ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ: ಪ್ರೇಮಿಗಳ‌ ದಿನ!

ಪ್ರೇಮಿಗಳ ದಿನ!

ಅಪರಿಚಿತರು
ತೀರಾ ಪರಿಚಿತರಾಗಿ
ಸಂಗಮದತ್ತ ಕೂಡಿ ನಡೆದು
ಅಲ್ಲಮರ ಅಂಗಳದಲ್ಲಿ ಅರಳಿ
ಅಂತರಜಾತಿ ವಿವಾಹಕ್ಕೆ ನಾಂದಿಯಾದರು

ನಾಂದಿಯ ದಿನವನ್ನೇ
ಅವರು ಪ್ರೇಮಿಗಳ ದಿನವೆಂದರು
ಇವರು ಧರ್ಮವಿರೋಧಿ ದಿನವೆಂದರು

ಪ್ರೀತಿಯ
ವಿರೋಧಿಗಳು
ವಚನದ ಕಟ್ಟು ಸುಟ್ಟು
ಶರಣ ಕುಸುಮಗಳ ಹೊಸಕಿದರು
ಪರಿಮಳ ಮಾತ್ರ ಜಗವ ಆವರಿಸಿಕೊಂಡಿದೆ.

-ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ