ಅನುದಿನ ಕವನ-೧೫೧೨, ಕವಿ: ಜಬೀವುಲ್ಲಾ ಎಮ್. ಅಸದ್, ಬೆಂಗಳೂರು, ಕವನದ ಶೀರ್ಷಿಕೆ: ನಾವು ಸೋಲಬೇಕಿದೆ

ನಾವು ಸೋಲಬೇಕಿದೆ

ನಾವು ಸೋಲಬೇಕಿದೆ
ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆಯ
ಮುಂದೆ ಮಂಡಿಯೂರಿ ಕೂತು

ನಾವು ಗೆಲ್ಲಬೇಕಿದೆ
ಕಾಮ, ಕ್ರೋಧ, ಲೋಭ, ಮದ, ಮತ್ಸರಗಳ
ಮಾಯೆಯನ್ನು ಮೆಟ್ಟಿ ನಿಂತು

ನಾವು ನಗಬೇಕಿದೆ
ಬದುಕಿನ ಬವಣೆಗಳ ಮರೆಸಿ
ನೋವು ಕಷ್ಟಗಳ ಅಳಿಸಿ

ನಾವು ನಿಲ್ಲಬೇಕಿದೆ
ನೊಂದವರ, ಶೋಷಿತರ ಪರವಾಗಿ
ಅನ್ಯಾಯದ ವಿರುದ್ಧವಾಗಿ

ನಾವು ಪ್ರೀತಿಸಬೇಕಿದೆ
ಜಾತಿ ಧರ್ಮಗಳ ಬಿಟ್ಟು
ಮನುಜರೆಲ್ಲ ಒಂದೇ ಕುಲವೆಂದು

ನಾವು ಕಳೆದುಕೊಳ್ಳಬೇಕಿದೆ
ರಾಗ ದ್ವೇಷಗಳ, ಅಸಹಿಷ್ಣುತೆಯ
ವೈರತ್ವಗಳ ಬೇರುಗಳ ಕಿತ್ತು


-ಚಿತ್ರ ಮತ್ತು ಕವಿತೆ:  ಜಬೀವುಲ್ಲಾ ಎಮ್. ಅಸದ್, ಬೆಂಗಳೂರು
—–