ಕರ್ನಾಟಕ ಕಹಳೆ ಸಾಹಿತ್ಯ ಬಳಗದ ಕವಯಿತ್ರಿ ಹೂವಿನ ಹಡಗಲಿಯ ಶೋಭ ಮಲ್ಕಿಒಡೆಯರ್ ಅವರು ಫೆ.25ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೊಂಡರು. ಈ ಹಿನ್ನಲೆಯಲ್ಲಿ ಹಿರಿಯ ಕವಿ ಪ್ರಕಾಶ ಮಲ್ಕಿಒಡೆಯರ್ ಅವರು ತಮ್ಮ ಪತ್ನಿ ಶೋಭ ಮಲ್ಕಿಒಡೆಯರ್ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ‘ನನ್ನವಳು’ ಕವನದ ಮೂಲಕ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಕರ್ನಾಟಕ ಕಹಳೆ ಸಾಹಿತ್ಯಬಳಗದ ಶೋಭ ಮಲ್ಕಿಒಡೆಯರ್ ಅವರಿಗೆ ಜನುಮದಿನದ ಶುಭಾಶಯಗಳು🍀🌺🎂🍀💐 *****
ನನ್ನವಳು
ನನ್ನವಳಿವಳು ಸುಂದರಿಯು
ಪಡೆದಿಹ ನಾನೇ ಸುಕೃತನು
ಗುಣದಲಿ ಇವಳು ಚಿನ್ನ
ಮೂರು ಮುತ್ತು ಕೊಟ್ಟ ರನ್ನ
ಭೂತಾಯಿಯ ತೂಕದ ಇವಳು
ಸುಳ್ಳು ತಟವಟ ಅರಿಯದ ಇವಳು
ನನ್ನಿಯ ಹೊರತು ಬೇರೇನೂ ತಿಳಿಯದ
ಮುಗುದೆಯು ನನ್ನವಳು
ತನುವಲಿ ಸುಂದರಿ, ಮನದಲಿ ಸುಂದರಿ
ಬಳುಕುವ ಇವಳು ವಲ್ಲರಿಯು
ಮಗಳಿಗೂ ತಾಯಿ, ಸೊಸೆಗೂ ತಾಯಿ
ವಸುಂಧರೆ ಇವಳು ನನ್ನವಳು
ಹೃದಯದಿ ಕರುಣೆ ಮಾತಲಿ ಮಮತೆ
ತುಂಬಿಹ ಇವಳು ನನ್ನವಳು
ಸಮಾಜಮುಖಿಯಾಗಿಹಳು
ಸರಸತಿಗಿವಳು ಅಡಿಯಾಳು
ಇವಳೇ ನೋಡು ನನ್ನವಳು
ನನ್ನವಳಿವಳು ಸುಂದರಿಯು
ಪಡೆದಿಹ ನಾನೇ ಸುಕೃತನು
ಬಿಗುಮಾನವ ಬಿಡದವಳು
ಸ್ವಾಭಿಮಾನದಿ ಮೆರೆವವಳು
ನನ್ನವಳಿವಳು ಸುಂದರಿಯು
ಪಡೆದಿಹ ನಾನೇ ಸುಕೃತನು
-ಪ್ರಕಾಶ್ ಮಲ್ಕಿ ಒಡೆಯರ್
ಹೂವಿನ ಹಡಗಲಿ
——