ವಿಎಸ್ ಕೆಯು: ನೂತನ ಕುಲಸಚಿವರಾಗಿ (ಮೌಲ್ಯಮಾಪನ) ಡಾ. ಎನ್. ಎಂ. ಸಾಲಿ ಅಧಿಕಾರ ಸ್ವೀಕಾರ

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಸಚಿವ(ಮೌಲ್ಯಮಾಪನ) ರಾಗಿ ಡಾ. ಎನ್. ಎಂ. ಸಾಲಿ ಅವರು ಶುಕ್ರವಾರ ಅಧಿಕಾರವನ್ನು ವಹಿಸಿಕೊಂಡರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಎನ್. ಎಂ. ಸಾಲಿ ಅವರನ್ನು ಸರ್ಕಾರ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಕುಲಸಚಿವ (ಮೌಲ್ಯಮಾಪನ)ರನ್ನಾಗಿ ನೇಮಿಸಿದೆ. ಈ ಹಿಂದೆ ಕಾರ್ಯಭಾರ ವಹಿಸಿಕೊಂಡಿದ್ದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ್ ಓ ಓಲೇಕಾರ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.                                     ಈ ಸಂದರ್ಭದಲ್ಲಿ ವಿವಿ ಕುಲಪತಿ ಪ್ರೊ. ಮುನಿರಾಜು, ಕುಲಸಚಿವ ರುದ್ರೇಶ ಎಸ್. ಎನ್ ಉಪಸ್ಥಿತರಿದ್ದರು.