ಪಕ್ಷಿ ಲೋಕದ ದ್ರೌಪದಿಯರು!? ಚಿತ್ರ-ಬರಹ: ವಿಜಯ್ ಇಟ್ಟಿಗಿ, ಹಗರಿಬೊಮ್ಮನಹಳ್ಳಿ

ಪಕ್ಷಿ ಲೋಕದ ದ್ರೌಪದಿಯರು!?

“. Pesentail jacana” fight
ಸ್ವಲ್ಪ ತಾಳಿ ಇದಕ್ಕೆ ಬೇರೆಯ ಅರ್ಥಕೊಡದೆ ಒದಿಕೊಳ್ಳಿ.
ಏಕಪತ್ನಿ ವೃತಸ್ಥ ಎಂದ ತಕ್ಷಣವೇ ನಮಗೆ ಮರ್ಯಾದ ಪುರುಷೋತ್ತಮ ನೆನಪಾಗಯತ್ತಾನೆ ಅದೇ ರೀತಿಯಲ್ಲಿ ಹಲವಾರು ಗಂಡಂದಿರು ಅಂದ ತಕ್ಷಣವೇ ದ್ರೌಪದಿ ನೆನಪಾಗುತ್ತಾಳೆ…ಅದೇ ರೀತಿಯಲ್ಲಿ ಪಕ್ಷಿಲೋಕದ ಹಲವಾರು ಗಂಡಂದಿರನ್ನು ಹೊಂದುವ “ಜಕಾನ” ಹಕ್ಕಿಗಳು!!!??

ಸಾಮಾನ್ಯವಾಗಿ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಅಮ್ಮ ಮಕ್ಕಳಿಗೆ ಕೈತುತ್ತು ತಿನ್ನಿಸುತ್ತಾ ಲಾಲನೆ, ಪೋಷಣೆ ಮಾಡುತ್ತಾ ತನ್ನ ಗಂಡ ಮತ್ತು ಮಕ್ಕಳಿಗಿಂತ ಹೆಚ್ಚಿನದೇನು ಇಲ್ಲ ಎಂದು ಬಾಳ್ವೆ ಮಾಡುತ್ತಿರುತ್ತವೆ. ಆದರೆ …ಸ್ವಲ್ಪ ನಿಲ್ಲಿ ಈ ಜಕಾನ ಹಕ್ಕಿಗಳ ಕಥೆನೆ ಬೇರೆ .

“ಜಕಾನ” ಹಕ್ಕಿಗಳು ಏಕ ಪತ್ನಿ ವ್ರತಸ್ಥ ಮರ್ಯಾದಾ ಪುರುಷೋತ್ತಮನಂತೆ ಬಾಳಲು ಗಂಡು ಹಕ್ಕಿಗಳು ಸಿದ್ದವಿರುತ್ತವೆ.ಆದರೆ ಇಲ್ಲಿ ಹೆಣ್ಣು ಹಕ್ಕಿಗಳು ಸುತಾರಂ ಒಪ್ಪದೆ ಒಂದೇ ಸಮಯದಲ್ಲಿ ಹಲವಾರು ಗಂಡಧಿರನ್ನು ಹೊಂದಿರುತ್ತವೆ having more than one husband at the same time.
ಹೆಣ್ಣು ಹಕ್ಕಿ ಒಂದು ಗಂಡಿನೊಡನೆ ಕೂಡಿ ಮೊಟ್ಟೆಯಿಟ್ಟರೆ ಆ ಗಂಡಿನೊಡನೆ ಇರುವ ಅದರ ಸಂಭಂದ ಇಲ್ಲಿಗೆ ಮುಗಿಯಿತು . ತನಗೂ ತನ್ನ ಮಕ್ಕಳಿಗೆ ಸಂಬಂಧವೆ ಇಲ್ಲದೆ, ಮತ್ತೊಂದು ಗಂಡನ್ನು ಆಕರ್ಷಣೆ ಮಾಡುತ್ತಾ ಅವುಗಳಿಗೆ ಕಾಳಹಾಕುತ್ತಾ ಮತ್ತೊಂದು ಗಂಡಿನ ಸಂಘ ಮಾಡಿ ಮೊಟ್ಟೆಯಿಟ್ಟು ಮತ್ತೊಂದು ಗಂಡನನ್ನು ಹುಡುಕಿಕೊಂಡು ಹೊರಟು ಬೀಡುತ್ತವೆ!!!

ಹೆಣ್ಣನ್ನು ಪಡೆಯಲು ಹಲವಾರು ಯುದ್ದಗಳೆ ನಡೆದಿರುವುದನ್ನು ಪುರಾಣ ಮತ್ತು ಚರಿತ್ರೆಯಲ್ಲಿ ಓದಿದ್ದೆವೆ…ಆದರೆ ದಿನನಿತ್ಯದ ಬದುಕಿನಲ್ಲಿ ಜಕಾನ ಹಕ್ಕಿಗಳು ಗಂಡಿಗಾಗಿ ಹೊಡೆದಾಡಿಕೊಂಡು ತನಗೆ ಬೇಕಾದ ಗಂಡನ್ನು ಪಡೆಯುವ ಗಟ್ಟಿಗಿತ್ತಿಯರಾಗಿದ್ದಾರೆ..

ನಮ್ಮ ಅಂಕಸಮುದ್ರ ಕೆರೆಯಲ್ಲಿ ಪಕ್ಷಿ ವಿಕ್ಷಣೇ ಮಾಡುತ್ತಾ ನಿಶ್ಚಲವಾಗಿ ಕುಳಿತಿದ್ದಾಗ ತೇಲುವಾ ಸಸ್ಯಗಳ ಮೇಲೆ ನಡೆದ ಜಗಳಕ್ಕೆ ನಾನು ಸಾಕ್ಷಿಯಾದಗಿನ ಚಿತ್ರ.
(ಛಾಯಾಚಿತ್ರ ಉತ್ತಮವಾಗಿ ಬರಲು ಸಹಕರಿಸಿದ ಮಹೇಶ್ ಪಾಲಣ್ಣನವರಿಗೆ ಧನ್ಯವಾದಗಳು)

-ವಿಜಯ್ ಇಟ್ಟಿಗಿ, ಹಗರಿ ಬೊಮ್ಮನಹಳ್ಳಿ