ನೀ…
ನೀ ಸೋತ ದಿನ
ಪ್ರೀತಿಗೆ;
ಲೋಕ ಒಲಿದಂತೆ
ನನಗೆ!
*
ನೀ ಸೋಲಲಾರೆ
ನನಗೆ!
ಲೋಕ ಒಲಿಯಲಾರದು
ಪ್ರೀತಿಗೆ!
*
ನಿನ್ನ ಗೆಲುವೆ ಸಾಕೆನಗೆ
ಲೋಕದ ಗೊಡವೆ ಬೇಡೆನಗೆ
*
ನೀ ಸೋತ ದಿನ
ಕವಿತೆಯ ಮೌನಾಚರಣೆ!
ವಿರಹಕ್ಕೆ ಶೋಕಾಚರಣೆ!!
*
ನೀ ಸೋಲಬಾರದು;
ನಾ ಗೆಲ್ಲಬಾರದು!
ಕವಿತೆ ನಿಲ್ಲಲೇಬಾರದು;
ಪ್ರೀತಿ ಮರೆಯಬಾರದು!
-ಟಿ ಪಿ. ಉಮೇಶ್, ಹೊಳಲ್ಕೆರೆ
—-