ಅಪ್ಪಾ!
ಮೆರೆಸುತ್ತಾನೆ ಹೆಗಲಾಗೆ ಹೊತ್ತು
ಸಲಹುತ್ತಾನೆ ಕೈ ತುತ್ತ ನಿತ್ತು
ಅರಸುತ್ತಾನೆ ನೆರಳಾಗೆ ನಿಂದು
ನಡೆಸುತ್ತಾನೆ ಜೊತೆಯಾಗೆ ಬಂದು
ಸಾಟಿನೆ ಇಲ್ಲ ನಿನಗೆ
ಈ ಜಗವೆ ಸೋತು ಶರಣಾಗಿದೆ ನಿನಗೆ
ಅಪ್ಪಾ…ನೀ….ನೆ ವಿಶಾಲ ಬೆಳಕಿನ ಕೊನೆ ಇರದ ಪಂಜು…
ತಲೆ ಎತ್ತಿ ಬಾಳೋ ಸರಿ ದಾರಿ ತೋರೋ
ಮೊದಲ ಗುರು ನೀನೆ ಅಲ್ಲವೆ
ಸಹನೆನಾ ಕಲಿಸೋ ಆದರ್ಶ ಹೀರೋ
ಸಹಬಾಳ್ವೆ ಸಂಪ್ರೀತಿ ನೀನೆ ಅಲ್ಲವೆ
ನಿನಂಗೆ ಯಾರು ಇಲ್ಲಿಲ್ಲವಲ್ಲ
ಭೂಮಿನೇ ಸೋತು ನಿಂಗೆ ಹಸಿರಾಯಿತಲ್ಲ
ನೋವ ಸರಿಸಿ ನಲಿವ ಹಂಚೋ ತ್ಯಾಗದ ಕಡಲು ನೀನು…
-ಸಿದ್ದು ಜನ್ನೂರ್, ಚಾಮರಾಜ ನಗರ