ಅನುದಿನ ಕವನ-೧೫೩೪, ಕವಯಿತ್ರಿ: ಅಶ್ವಿನಿ ಬಿ ವಡ್ಡಿನಗದ್ದೆ, ಬೆಂಗಳೂರು

ಹೋಳಿಯ

ಬಣ್ಣವಿರಲಿ ಒಂದು ಚೂರು

ಪಿಂಕು ಬಲು ತಂಪು ಕಣ್ಣಿಗೆ!!

ಬರಲಿ ಬಿಡು

ಬಣ್ಣಗಳ ಮಳೆ ಚಿಮ್ಮುತ್ತ

ಚೆಲ್ಲುತ್ತ ಬಣ್ಣಗಳ ಬಣ್ಣವನ್ನು!!.

ಜೊತೆಗೂಡಿ ನಡೆದಾಡಿ

ಆಡುವುದು ಹೇಗೆ ಹೋಳಿಯನ್ನು.

ಜೊತೆ ಬಿಟ್ಟು ನಡೆವಾಗ ನೀನು!!

ಬಂದು ಬಿಡು ಇತ್ತ ನನ್ನತ್ತ

ಆಡಿಬಿಡೋಣ ಹೋಳಿಯ ಗುಲಾಲನ್ನು

ಅತ್ತ ಚೆಲ್ಲುತ್ತ ಚಿಮ್ಮುತ್ತ ಒಂದು

ಚೂರು ಸರಿಯಾ!!

-ಅಶ್ವಿನಿ ಬಿ ವಡ್ಡಿನಗದ್ದೆ, ಬೆಂಗಳೂರು

—–