ಯಾರು ಬದಲಾಗಿದ್ದಾರೆ?
ಆಯಸ್ಸು ಮುಗಿಯದೆ
ಆಯಾಸವಿಲ್ಲದೆ
ಭೂಮಿ ಸುತ್ತುತ್ತಿದೆ
ಪ್ರತಿಫಲ ಬಯಸದ
ನೇಸರ ಬೇಸರಿಲ್ಲದೆ
ಬಿಸಿಲು ಬೆಳಕು
ನೀಡುತ್ತಿದ್ದಾನೆ
ಚಂದ್ರ ನೀಲಿ
ಗಗನದಲಿ
ನಕ್ಷತ್ರಗಳ ಮಧ್ಯ
ತೇಲುತ್ತ ಬೆಳದಿಂಗಳು
ಚಲ್ಲುತ್ತಿದ್ದಾನೆ
ಮಳೆ ಗಾಳಿ ಉಷ್ಣ
ಶೀತ ಸಕಲ ಜೀವಗಳಿಗೂ
ನೆರವಾಗಿ ಆಗಾಗ
ಎಚ್ಚರಿಕೆ ಘಂಟೆಯೂ
ಭಾರಿಸುತಿವೆ
ಪ್ರಾಣಿ ಪಕ್ಷಿ ಜೀವಿ ಜಲಚರ
ಪರಸ್ಪರ ಬೆಲೆ ಕೊಟ್ಟು
ನೆಲೆಕಂಡುಕೊಂಡು
ಸಹಜೀವನ ನಡೆಸುತಿವೆ
ಬೌದ್ಧಿಕ ಭೌತಿಕವಾಗಿ
ಮುಂದುವರೆದ ಮನುಷ್ಯ
ಕೆಲವೊಮ್ಮೆ
ಮಾನವೀಯತೆ
ಮರೆಯುತ್ತಿದ್ದಾನೆ !
-ಶರಣಗೌಡ ಬಿ.ಪಾಟೀಲ ತಿಳಗೂಳ
ಕಲಬುರಗಿ
-ಶರಣಗೌಡ ಬಿ.ಪಾಟೀಲ ತಿಳಗೂಳ. ಕಲಬುರಗಿ