ತೆಕ್ಕಲಕೋಟೆ, ಮಾ.೧೫: ಸಮಾಜದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅನನ್ಯವಾಗಿದೆ ಎಂದು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಹೇಳಿದರು.
ತೆಕ್ಕಲಕೋಟೆ ಶ್ರೀಮತಿ ಹೊನ್ನೂರಮ್ಮ ದಿ.ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಐಕ್ಯೂಎಸ್ ಹಾಗೂ ಮಹಿಳಾ ಕುಂದುಕೊರತೆ ಕೋಶದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕುಟುಂಬ ನಿರ್ವಹಣೆಯಲ್ಲಿಮಹಿಳೆಯರ ಪಾತ್ರ ದೊಡ್ಡದಿದೆ. ಹೀಗಾಗಿ ಮಹಿಳೆಯರು ಸಮಾಜ ಹಾಗೂ ಕುಟುಂಬದ ಕಣ್ಣಾಗಿದ್ದಾರೆ. ಪ್ರತಿಯೊಬ್ಬರೂ ಮಹಿಳೆಯರಿಗೆ ಗೌರವ ನೀಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿ ಸಹನಾ ಮಲ್ಲಿಕಾರ್ಜುನ ಮೋಕ ಮಾತನಾಡಿ, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಪ್ರತಿಯೊಬ್ಬ ಮಹಿಳೆಯರು
ಮೆಟ್ಟಿ ನಿಲ್ಲಬೇಕು. ಕಷ್ಟ ಬಂದಾಗ ಕುಗ್ಗಬಾರದು. ಸಂತೋಷ ಬಂದಾಗ ಹಿಗ್ಗಬಾರದು. ಸುಂದರ ಜೀವನ ನಡೆಸಬೇಕು ಎಂದು ಹೇಳಿದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಮಹಿಳಾ ಕುಂದು ಕೊರತೆ ಕೋಶದ ಅಧ್ಯಕ್ಷೆ ಡಾ.ಮಹೇಶ್ವರಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಶಿಕ್ಷಣದಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಮಹಿಳೆಯರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ವಾಣಿಜ್ಯ ಶಾಸ್ತ್ರ ವಿಭಾಗ ಪ್ರಾಧ್ಯಾಪಕಿ ಆಶಾಲತಾ ಮಾತನಾಡಿ, ವಿದ್ಯಾರ್ಥಿನಿಯರು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಗುರಿ ಸಾಧನೆಗೆ ಸತತ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಯುವ ಸ್ಫೂರ್ತಿ ಪತ್ರಿಕೆ ಬಿಡುಗಡೆ: ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರ ತಂದ ಪ್ರಾಯೋಗಿಕ
ಪತ್ರಿಕೆಯನ್ನು ಮುಖ್ಯ ಅತಿಥಿ ಸಹನಾ ಮಲ್ಲಿಕಾರ್ಜುನ ಮೋಕ ಅವರು ಬಿಡುಗಡೆಗೊಳಿಸಿದರು.
ಬಹುಮಾನ ವಿತರಣೆ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ನಾನಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಸಾಧಕ ಮಹಿಳೆಯರನ್ನು ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ನಿಮಿತ್ತ ಕಾಲೇಜು ಆವರಣದಲ್ಲಿಸಸಿಗಳನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥೆ ತೇಜಶ್ವಿನಿ, ವಾಣಿಜ್ಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ, ಸವಿತಾ, ಇಂಗ್ಲಿಷ ವಿಭಾಗದ ಪ್ರದ್ಯಾಪಕಿಯರಾದ ವರಲಕ್ಷ್ಮಿ, ಸರಸ್ವತಿ, ಇತಿಹಾಸ ವಿಭಾಗದ ಮುಖ್ಯಸ್ಥ ಎ.ಎಸ್.ಬಸವರಾಜ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ರಾಘವೇಂದ್ರ, ಕನ್ನಡ ವಿಭಾಗದ ಪ್ರಾಧ್ಯಾಪಕ ರಾಮಾಂಜನೇಯ,
ಅತಿಥಿ ಪ್ರಾಧ್ಯಾಪಕರಾದ ಡಾ.ರಾಜಣ್ಣ, ಡಾ.ಶಿವಣ್ಣ, ಕುಮಾರ ಸ್ವಾಮಿ, ರಾಜೇಶ, ಸುಭಾನ್, ಎಚ್.ವೀರೇಶ, ಅಸನೇಪ್ಪ ನಾಯಕ, ಕಾಳಿಂಗ ನಾಯಕ್ ಇದ್ದರು.
—–