ಅಪ್ಪು….
ಎಲ್ಲರೆದೆಗೆ ತಾಗಿಕೊಂಡ
ಕಿಡಿ ನೀನು
ಸದಾ ಬೆಳಗುತ್ತಲೇ ಇರುವ ಬೆಳಗು…
ಗಾಜನೂರ ಹಟ್ಟಿ ಕಂಬದ ನಡುವೆ
ದಿಗ್ಗನೆಂದು ಬಂದ,
ಸದಾ ಹೊಳೆಯುತ್ತಲೇ ಇರುವ ನಕ್ಷತ್ರ ನೀನು
ಅಗಣಿತ ತಾರಗಣಗಳ ಗುಂಪು
ಅಪ್ಪುವೆಂದು ಹಂಬಲಿಸುತ್ತಲೇ ಬೆಳಗುವ ಕಾಂತಿ ನೀನು…
ಕರುನಾಡ ಭೂಪಟಕ್ಕೆ
ನಿನ್ನೇಸರೆ ನಿತ್ಯ ಸ್ಮರಣೆಕೆ
ಯುಗಯುಗಕ್ಕೂ ಧಾಟಿ
ಉಳಿಯುವ ನಿನ್ನೇಸರು
ಶಾಶ್ವತವಾದ ಕನ್ನಡಮ್ಮನ ಹಾಗೆ
ಮೆರೆಯುತ್ತಲೇ ಇರುತ್ತದೆ
ಅಪ್ಪುವೆಂಬೋ ಕಾವ್ಯನಾಮ…
ಕನ್ನಡ ಪದವೆ
ಕನ್ನಡ ನುಡಿಯೆ
ಹಬ್ಬಿ ಬೆಳೆದ ಹಾಗೆ
ಊರೂರಿಗೆ ಕೇರ್ಕೇರಿಗೆ
ಮಲ್ಲಿಗೆ ಘಮ ಹಬ್ಬಿದ ಹಾಗೆ ನಿನ್ನೇಸರು
ಹಬ್ಬುತ್ತಲೇ ಇರುವ ಕನ್ನಡ ರಸ ಬಳ್ಳಿ
ಅಪ್ಪುವೆಂಬ ಹೆಸರು
ನಾಡಗಲ ಜಗದಗಲ
ಕಿವಿಗೆ ಕನ್ನಡ ಪದಗಳ್ ಇಂಪಿನಂತೆ
ಗುಂಯ್ ಅನ್ನುತ್ತಲೇ ಇರುತ್ತದೆ
ಅಪ್ಪುವೆಂಬ ಹೆಸರು….
-ಸಿದ್ದು ಜನ್ನೂರ್, ಚಾಮರಾಜ ನಗರ