ನಶ್ವರದ ಜೀವ
ಸಿಡಿದೆದ್ದ ಜ್ವಾಲೆಯೊಳು
ಮೌನದ ಆಹುತಿ ಅಳುತಿದೆ.
ಗೊತ್ತಿಲ್ಲ ಅಳುತಿದೆ….
ಮನ ಪಳ್ಳೆoದು ಆಗಸದ
ಮೋಡ ಒಡೆದು ಚೂರಾಗಿದೆ
ಇದಕೆ ಮರದ ರೆಂಬೆ ಕೊಂಬೆ ಗಳೆಲ್ಲ ಮಾತಾಡದೆ ಕಣ್ಣೀರು
ಸುರಿಸುತ್ತಿವೆ…
ಹಿಸುಕಿದೆ ಕತ್ತು ಜೀವನದ
ಜ್ವಾಲೆಯಲಿ,
ತಲೆಬುಡವಿಲ್ಲದ ದಾರಿಯಲಿ
ಯೋ ಚಿಸಿದೆ ಸುಂಕವಿಲ್ಲದ ಜ್ಞಾನ.
ಹರಕು ಚಪ್ಪರದ ತೂತಿನಲಿ
ಹೃದಯದ ಉಸಿರು
ಡಬ ಡಬನೇ ಬಡಿದು ಕೊಂಡು
ಬಾಯಾರಿಕೆಯ ನೀರಿಗೆ
ಬದಬಡಿಸುತಿದೆ….
ಇದಕೆ ಜಾತಿಯ ಕಡಿವಾಣ
ಅಡ್ಡಬರುತಿದೆ..
ಆಲೋಚನೆ ಯ ಕಬಳಿಕೆಗೆ
ಮಾನವತೆ ಮರೀಚಿಕೆಯಾಗಿ
ಸಾಗುತಿದೆ…
ಒಂದೊಂದು ಕಿಟಕಿಗೂ
ವಿವಿಧ ಜಾತಿಯ ಸೂಚಕ
ಹೌ ಹಾರುತಿದೆ….
ಇದನೆಲ್ಲ ಕಂಡು ಯಾವ
ಹಾದಿಯ ಕೈ ಹಿಡಿಯಲಿ
ನಶ್ವರ ವಾದ ಜೀವಕೆ
ವಿವಿಧತೆ ವಾದ ನ್ಯಾಯ ಸಿಗದೇ
ಶ್ರಮಿಸಿ ಓಡಾಡುತ್ತಿದೆ…
ನಂಬಲಾರದ ವ್ಯಾಮೋಹಕೆ
ನೂರೆಂಟು ತವಕ,
ಸಾಯುತಿದೆ ಸತ್ತ ಸಂಕಟದ ರಕ್ತ
ಹರಿದಿದೆ ಜಮಖಾನೆಯ
ಖಾದಿಯ ಮೇಲೆ….
-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ
—–