ನೀನು ವಾಕಿಂಗ್ ಹೊರಟು ಮರೆಯಾಗಿಬಿಡುವ ತಿರುವಿನಲ್ಲಿ ಹೆಸರಿಲ್ಲದ ಹೂವಿನ ಮರವೊಂದಿದೆ ಅದರ ಎರಡನೇ ಟೊಂಗೆಯ ಒಂಟಿ ಗೊಂಚಲಿನ ಪುಟ್ಟ ತಿಳಿ ನೀಲಿ ಹೂವು ನಾನು ಉದುರಿ ಹೋಗುವ ದಿನ. ನಿನ್ನೆದೆಗೆ ನನ್ನನ್ನು ಎಸೆದು ಹೋಗುವ ಒಂದು ಸುಳಿಗಾಳಿಗಾಗಿ ಪ್ರಾರ್ಥಿಸುತ್ತಿರುವೆ ಎತ್ತಿ ನೆತ್ತಿಗೆ ಮುತ್ತಿಟ್ಟು ಮುಗುಳುನಗುತ್ತ ಪ್ರೇಮಿಯನ್ನು ನೆನಪಿಸಿಕೊಂಡೆಯಾದರೆ ನನ್ನ ಎರಡು ದಿನದ ಬದುಕು ಸಂಪನ್ನ
-ರೇಣುಕಾ ರಮಾನಂದ, ಹೊನ್ನಾವರ, ಉತ್ತರ ಕನ್ನಡ ಜಿ.
—–