ಅನುದಿನ ಕವನ-೧೫೪೮, ಹಿರಿಯ ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ತನಗಗಳು

ತನಗಗಳು


ಯುಗಾದಿಯ ಹಬ್ಬಕೆ
ಹೊಸತು ಸಂವತ್ಸರ
ಮರೆಯೋಣ ನಾವೆಲ್ಲ
ಹಿಂದಿನೆಲ್ಲ ಮತ್ಸರ

ವಸಂತಾಗಮನಕೆ
ಹೊಂಗೆ ಹೂವಿನ ಘಮ
ದುಂಬಿಗಳ ದಾಂಗುಡಿ
ಸಂಗೀತದ ಸಂಭ್ರಮ

ಸುಖ ದುಃಖಗಳವು
ಬೇವು ಬೆಲ್ಲಗಳಂತೆ
ಯುಗಾದಿ ನೆಪದಲಿ
ಬಿಡೋಣ ಎಲ್ಲ ಚಿಂತೆ

ಬೋಳಾದ ಮರತುಂಬ
ಚಿಗುರಿನ ತೋರಣ
ಮೊಗ್ಗು ಹೂವಿನ ಮಧ್ಯೆ
ಮಿಡಿಕಾಯಿ ಕಂಕಣ

ಒಣಗಿದ ಮರದಿ
ಹಸಿರಿನ ಹಂದರ
ಶಿಶಿರದ ಮೌನಕೆ
ವಸಂತದ ಉತ್ತರ

ಸಿಹಿ ಕಹಿಗಳವು
ಬದುಕಿನ ಹೂರಣ
ಸಂತಸ ಬದುಕಿಗೆ
ಸಮಚಿತ್ತ ಕಾರಣ


-ಸಿದ್ದಲಿಂಗಪ್ಪ ಬೀಳಗಿ.ಹುನಗುಂದ