ಅನುದಿನ ಕವನ-೧೫೫೯, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ನನ್ನ ಮಲ್ಲಿಗೆ…

ನನ್ನ ಮಲ್ಲಿಗೆ…

ಒಲವಿಗೆಗಲ ಕೊಟ್ಟೆ ನೀನು
ಒಲವಿನೊಲವ ಚೆಲುವು ನೀನು
ಒಲವೆ ಆಗಿ ಬಂದೆ ನೀನು
ಒಲವನೊತ್ತ ಗೆಲುವು ನೀನು
ನನ್ನ ನಾಳೆ ಮಲ್ಲಿಗೆ…

ಎಲ್ಲ ಬೇನೆ ದೂಡಿದವಳೇ
ಕೂಡಿಕೊಂಡೆ ಕಷ್ಟ ಕಳೆದು
ನೂರು ಬಾರಿ ಮೆಚ್ಚಿದವಳೇ
ಬಂದೆ ಬಳಿಗೆ ನೋವ ಮುರಿದು
ನೀನೆ ಗಂಧ ಮಲ್ಲಿಗೆ…

ಹೆಚ್ಚು ಹೆಚ್ಚು ಪ್ರೀತಿ ತೋರಿ
ಸನಿಹವಾದ ಸವಿ ಸಿರಿ
ಕಷ್ಟನೆಲ್ಲ ಗಾಳಿಗೆ ತೂರಿ
ಇಷ್ಟವಾದೆ ಹೃದಯ ಸೇರಿ
ನೀನೆಂದರೆ ಹಾಗೆ ನನ್ನ ಮಲ್ಲಿಗೆ…


-ಸಿದ್ದು ಜನ್ನೂರ್, ಚಾಮರಾಜನಗರ