ತೆಕ್ಕಲಕೋಟೆ(ಸಿರುಗುಪ್ಪ ತಾ.): ಪ್ರತಿಯೊಬ್ಬರೂ ಜಾನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಪಣತೊಡಬೇಕು ಎಂದು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಮೋಕ ಹೇಳಿದರು.
ಸ್ಥಳೀಯ ಶ್ರೀಮತಿ ಹೊನ್ನೂರಮ್ಮ ಸಿದ್ದಪ್ಪ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಶುಕ್ರವಾರ ಆಯೋಜಿಸಿದ್ದ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾನಪದ ತಾಯಿ ಇದ್ದಂತೆ ಹಾಗೂ ನಮ್ಮೆಲ್ಲರ ಉಸಿರಾಗಿದೆ. ಗ್ರಾಮೀಣ ಪ್ರದೇಶದಲ್ಲಿಹೆಚ್ಚಾಗಿ ಕಂಡು ಬರುತ್ತದೆ ಎಂದು ತಿಳಿಸಿದರು. ಜಾನಪದ ಸಂಸ್ಕೃತಿ ನಮ್ಮ ನೆಲೆಯ
ಮಹತ್ವವನ್ನು ತಿಳಿಸುತ್ತದೆ. ಸಮಾಜದಲ್ಲಿಜಾನಪದಕ್ಕೆ ಮಹತ್ವದ ಸ್ಥಾನ ಮಾನ ಇದೆ ಎಂದರು. ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಬೆಳಸಬೇಕಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಜಾನಪದ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ರಾಮಾಂಜನೇಯ ಮಾತನಾಡಿ, ಯುವ ಜನಾಂಗ ಜಾನಪದದ ಮಹತ್ವವನ್ನು ಅರಿತುಕೊಳ್ಳಬೇಕು.
ಜೀವನದಲ್ಲಿಜಾನಪದಕ್ಕೆ ಆದ್ಯತೆ ನಿಡಬೇಕು ಎಂದು ಹೇಳಿದರು.
ಎತ್ತಿನ ಬಂಡಿಯಲ್ಲಿಮೆರವಣಿಗೆ: ಕಾಲೇಜಿನ ಆವರಣದಲ್ಲಿಎತ್ತಿನ ಬಂಡಿ ಮೆರವಣಿಗೆ ನಡೆಯಿತು. ಪ್ರಾಧ್ಯಾಪಕರು,
ಪ್ರಾಧ್ಯಾಪಕಿಯರು ಹಾಗೂ ವಿದ್ಯಾರ್ಥಿಗಳು ವಿಶೇಷ ಬಟ್ಟೆ ಧರಿಸಿ, ಗಮನ ಸೆಳೆದರು.
ಜಾನಪದ ನೃತ್ಯ: ಜಾನಪದ ಉತ್ಸವ ನಿಮಿತ್ತ ನಡೆದ ಸಮಾರಂಭದಲ್ಲಿವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಜಾನಪದ ನೃತ್ಯ ಪ್ರದರ್ಶಿಸಿದರು.
ಜಾನಪದ ಹಾಡು ಹಾಗೂ ಡೊಳ್ಳು ಬಾರಿಸುವ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ತೇಜಶ್ವಿನಿ, ವಾಣಿಜ್ಯ ಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕಿಯರಾದ ಆಶಾಲತಾ, ಸವಿತಾ, ಇಂಗ್ಲಿಷ ವಿಭಾಗದ ಸಹಾಯಕ ಪ್ರಾಧ್ಯಾಪಕಿಯರಾದ ವರಲಕ್ಷ್ಮಿ, ಸರಸ್ವತಿ, ಉಪನ್ಯಾಸಕರಾದ ಡಾ.ರಾಜಣ್ಣ, ಡಾ.ಶಿವಣ್ಣ, ಕುಮಾರ ಸ್ವಾಮಿ, ಸುಭಾನ್, ಎಚ್.ವೀರೇಶ, ಅಸನೇಪ್ಪ ನಾಯಕ, ಕಾಳಿಂಗ ನಾಯಕ್, ಬಸನಗೌಡ ಇದ್ದರು.
—–