ಅನುದಿನ ಕವನ-೧೫೬೧, ಕವಯಿತ್ರಿ: ಪಾರ್ವತಿ ಸ್ವಪ್ನ, ಬೆಂಗಳೂರು, ಕವನದ ಶೀರ್ಷಿಕೆ:ನನ್ನೊಲವೇ

ನನ್ನೊಲವೇ

ನೀನಿರಲು ಜೊತೆಯಲ್ಲಿ…
ಜಾಜಿ ಮಲ್ಲಿಗೆಯ ಕಂಪು
ಹಕ್ಕಿಗಳ ಕಲರವ ಇಂಪು
ಸುಡುವ ಸೂರ್ಯನೂ ತಂಪು…

ನೀನಿರಲು ಜೊತೆಯಲ್ಲಿ….
ಹೃದಯ ಮಾಡುವುದು ನರ್ತನ
ಮುಳ್ಳಿನ ಹಾದಿಯು ಹೂಬನ
ಬದುಕು ಸುಂದರ ನೀನದರ ಚೇತನ…..

ನೀನಿರಲು ಜೊತೆಯಲ್ಲಿ……..
ನಾಳೆಗಳ ಚಿಂತೆಯಿಲ್ಲಾ.
ನೆನ್ನೆಗಳ ಅರಿವು ಇಲ್ಲಾ
ಇಂದೆಂಬಾ ಸತ್ಯವೇ ಕಣ್ಣ ಮುಂದೆ ಎಲ್ಲಾ……

ನೀನಿರಲು ಜೊತೆಯಲ್ಲಿ……….
ಹಸಿವು ನೀರಡಿಕೆಯಿಲ್ಲಾ
ಬಿಂಕ ಬಿಗುಮಾನವಿಲ್ಲಾ
ನಾ ನೀ ಎಂಬಾ ಭೇಧವಿಲ್ಲಾ…….

ನೀನಿರದಿದ್ದರೂ ಜೊತೆಯಲ್ಲಿ…..
ನಾನಿರುವೇ ನಿನ್ನಲ್ಲಿ
ದೂರಾದರೂ ದೇಹ ನಿನ್ನಿಂದ
ದೂರಗದೂ ಈ ಜೀವ ನಿನ್ನಿಂದ …….


-ಪಾರ್ವತಿ ಸಪ್ನ, ಬೆಂಗಳೂರು
—–