ಒಂಟಿತನವಿಲ್ಲಿ
ಮುಗಿಯುವುದಿಲ್ಲ
ನಿರೀಕ್ಷೆಗಳು
ಹೆಗಲು ಹೇರಿದ ಚೀಲ
ಆಸರೆಗಳು
ತಾತ್ಕಾಲಿಕ
ಖಾಯಂ
ಊರುಗೋಲಿಗಿಲ್ಲಿ
ನಾಳೆಗಳು
ಭಿಕ್ಷೆ ಬೇಡಿಸುತ್ತವೆ
ದಿನವು
ಎಡವುತ್ತಿರುವ
ಕಾಲಿಗಿಲ್ಲಿ
ರಕುತದ ಹರಿವು ಸಹ ಜಡ
ತಿಳಿವೊಲ್ಲದು
ಚಿಕಿತ್ಸಕದ ರೂಪ
ಕೀವು ಕಟ್ಟಿದ
ಆಳದ ಗಾಯಗಳಿಗೆ
ದೂಡುತ್ತಿರುವ
ಗಳಿಗೆಗಳು
ನನ್ನಂತೆ ನಿಧಾನ
ನನ್ನದೆ ಒಂಟಿತನ
ಕೊನೆಗೆ
ನನಗೆ ನಾನೇ ಸಮಾಧಾನ
-ಲೋಕಿ, ಬೆಂಗಳೂರು
—–