ನಾನು ಬರೆಯುತ್ತೇನೆ
ನಾನು ಬರೆಯುತ್ತೇನೆ
ಯಾರನ್ನೂ ಮೆಚ್ಚಿಸಲಲ್ಲ
ಹೊಗಳಿಸಿಕೊಳ್ಳಲೂ ಅಲ್ಲ
ಉಪದೇಶಕ್ಕಾಗಿ ಖಂಡಿತ ಅಲ್ಲ
ಕೇವಲ –
ಹೃದಯದ ಮಿಡಿತವನ್ನು
ಅಕ್ಷರಗಳನ್ನಾಗಿಸುವುದಕ್ಕಾಗಿ
ಮತ್ತು
ಆಗಾಗ ಸಾಯುವ ಬದುಕನ್ನು
ಮತ್ತೆ ಬದುಕಿಸುವುದಕ್ಕಾಗಿ
ನಾನು ಬರೆಯುತ್ತೇನೆ
ನನ್ನೊಳಗೆ ಅರಳಿದ ಹೂಗಳು
ಮತ್ತೊಬ್ಬರ ಮನಗಳಲ್ಲೂ ಅರಳಲೆಂದು
-ಸಿದ್ಧರಾಮ ಕೂಡ್ಲಿಗಿ