ಅನುದಿನ ಕವನ-೧೫೭೦, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಒಬ್ಬಂಟಿಯೊಬ್ಬನ ದ್ವಿಪದಿಗಳು

ಒಬ್ಬಂಟಿಯೊಬ್ಬನ ದ್ವಿಪದಿಗಳು

ಸುತ್ತಲೂ ಭೋರ್ಗರೆಯುತಿವೆ ಹುಚ್ಚು ಅಲೆಗಳು
ನನ್ನೆದೆಯೊಳಗೋ ಸದಾ ಒಂಟಿ ನಾವೆ

ಒಂಟಿತನವನು ಕಂಡು ಮಾತನಾಡಿಸಿದೆ
ಅದರ ಕಣ್ಣೊಳಗೆ ನನ್ನನೇ ಕಂಡು ಬೆಚ್ಚಿಬಿದ್ದೆ

ನೀರವ ಮೌನದಲಿ ಕಪ್ಪು ಚುಕ್ಕೆಯಂತೆ ಒಂಟಿಯಾಗಿದ್ದೆ
ಕತ್ತಲ ಕ್ಯಾನ್ವಾಸು ನನ್ನನೇ ನುಂಗಿ ಕಾಣದಂತಾದೆ

ಹೃದಯಗಳಿಲ್ಲದವರ ಜೊತೆಗಿಂತ ಒಂಟಿತನ ಒಳ್ಳೆಯದು
ಹುಚ್ಚು ಮಾತುಗಳಿಗಿಂತ ಮೌನ ಇನ್ನೂ ಒಳ್ಳೆಯದು

ಚಿತ್ರ ಮತ್ರು ಕವನ: ಸಿದ್ಧರಾಮ ಹಿರೇಮಠ, ಕೂಡ್ಲಿಗಿ
—–