ಎಲ್ಲಿದೆ?
ಉಷಾಕಾಲದಲ್ಲಿ ಅವನು
ಪ್ರಾರ್ಥಿಸುವುದ ನೋಡಿದೆ
ಸೂರ್ಯ ನೆತ್ತಿಯ ಮೇಲೆ ಬಂದಾಗ
ಪ್ರಾರ್ಥಿಸುವುದನು ನೋಡಿದೆ
ಮಧ್ಯಾನ್ಹ ಏರು ಹೊತ್ತಿನಲ್ಲಿ
ಪ್ರಾರ್ಥಿಸುವುದ ನೋಡಿದೆ
ಸೂರ್ಯ ಮುಳುಗಿದ ಮೇಲೆ
ಪ್ರಾರ್ಥಿಸುವುದ ನೋಡಿದೆ
ಕತ್ತಲು ಕವಿಯುತ್ತಿರುವಾಗ
ಪ್ರಾರ್ಥಿಸುವುದ ನೋಡಿದೆ
ಅವನ ನಾಲಗೆ ಸ್ತುತಿಸುವುದನೂ
ಅವನ ಹೃದಯ ತೊಯ್ದು ಹೋಗಿರುವುದನ್ನೂ
ಅವನ ಕೈಗಳು
ಪರವಶವಾಗಿರುವುದನ್ನೂ ಕಂಡೆ
ಶ್ರದ್ಧಾಳುವಿಗೆ ಕೇಡು ಬಗೆಯಲು
ಸಮಯವಾದರೂ ಎಲ್ಲಿದೆ?
-ಸವಿತಾ ನಾಗಭೂಷಣ, ಶಿವಮೊಗ್ಗ
—–