ಸಂವೇದನೆಯ ಕಡಲು
ಮುರಿದಿದೆ ಮೌನದ ಕಡಲು
ಇದಕೆ ಸಂವೇದನೆಯ ಕವಲು
ಮನದ ವಾದ ಬಡಿತದಿ
ಸೋತು ಕಬುರಿಲ್ಲದೆ
ಅಳುಕುತಿದೆ….
ಪ್ರತಿ ಗೋಡೆಯು ಹಸನ್ಮುಖಿ
ಯಾಗಿ ಕಂಗೊಳಿಸಿ ಪಿಸುಗುಡುತ್ತಿವೆ.
ಪ್ರಕೃತಿಯ ದಾರಿಗೆ ಪ್ರತಿ ಎಲೆಯು ಬಿಸಿಲ ಧಗೆಗೆ
ಬೆವರುತ್ತಿವೆ..
ನದಿಯ ಅಂಚು ಹೇಳ ಹೆಸರಿಲ್ಲದೆ ಒದ್ದಾಡುತ
ಕಣ್ಣೀರು ಸುರಿಸಿ ನೋಡ ನೋಟುಗರನ್ನು ಎಚ್ಚರಿಸುತ್ತಿದೆ..
ಏಕೋ ಗೊತ್ತಿಲ್ಲ
ಮೌನದ ಒಂಟಿತನ ಕಾಡುತ
ಸಂವಾದದ ಕಟುಕಟೆಗೆ
ಕರೆದೊಯ್ದಿದೆ.
ದಾರಿಯ ಸುಳಿವಿಲ್ಲದೆ ಶೂಲ
ಸೂಚನೆ ಸೂಚಿಸಿ ದಿಕ್ಕು ತಪ್ಪಿಸುತಿದೆ…
ಸಮಾಜದ ಬೆಂಬಲವಿಲ್ಲದೇ
ಹಗಲಿರುಳು ನೆಲೆಯಿಲ್ಲದ
ಬಂಧುತ್ವವ ನೆನಪಿಸಿ
ಮನ ಕವಲೊಡೆದಿದೆ…
ಯಾವ ಜನುಮ ಹೋರಾಟದಿ
ಸಿದ್ದಗೈದಿದಿಯೋ ಕಾಣೆ?
ಸಕರಾತ್ಮಕ ಬೆಳವಣಿಗೆಯಲಿ
ನಕಾರಾತ್ಮಕ ಬಿಂದು ಪದೇ ಪದೇ ಮನವ ಹಿಚುಕಿ
ಅಲ್ಲೋಲ ಕಲ್ಲೋಲ ಮಾಡಿದೆ..
ಇದಕೆ ಉತ್ತರ ಗಂಗಾಳದ
ಅನ್ನ ಕೂಡ ಎಚ್ಚರಿಸಿದೆ.
ಏನು ಮಾಡಲಿ ಮನದ ಸಂವಾದಕೆ ಕಡಲ ಕಲ್ಲು ಕೂಡ
ಸುಮ್ಮನಾಗಿದೆ
-ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ