ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯ. -ಡಾ. ಯು. ಶ್ರೀನಿವಾಸ ಮೂರ್ತಿ

ಬಳ್ಳಾರಿ, ಏ.26: ಸುಸ್ಥಿರ ಭವಿಷ್ಯ ರೂಪಿಸಲು ನವೀಕರಿಸಬಹುದಾದ ಇಂಧನಗಳ ಬಳಕೆಯ ಅಗತ್ಯತೆ ಇಂದು ಜರೂರಾಗಿದೆ ಎಂದು ವಿಜ್ಞಾನ ಸಾಹಿತ್ಯ ಲೇಖಕ ಡಾ.ಯು.ಶ್ರೀನಿವಾಸ ಮೂರ್ತಿ ಅವರು ಪ್ರತಿಪಾದಿಸಿದರು.
ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಜ್ಞಾನ – ವಿಜ್ಞಾನ ಸಮಿತಿ ಸಹಯೋಗದೊಂದಿಗೆ ಏರ್ಪಡಿಸಿದ್ದ “ವಿಶ್ವ ಭೂಮಿ ದಿನಾಚರಣೆ ” ಕಾರ್ಯಕ್ರಮದಲ್ಲಿ  ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು.                                        2030 ರ ವೇಳೆಗೆ ಸೌರಶಕ್ತಿ, ಪವನಶಕ್ತಿ,ಉಬ್ಬರವಿಳಿತ, ಭೂಶಾಖ ಮತ್ತು ಜಲಶಕ್ತಿಯಂತಹ ಪುನರ್ ನವೀಕರಣ ಶಕ್ತಿಗಳನ್ನು ಹೆಚ್ಚೆಚ್ಚು ಬಳೆಸುತ್ತಾ ಭೂಮಿಯ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.              ಭೂಮಿಯ ಮೇಲೆ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಇದಕ್ಕೆಲ್ಲ ಕಾರಣ ನಾವು ಬಳೆಸುವ ವಾಹನಗಳು, ಕಾರ್ಖಾನೆಗಳು, ರಾಸಾಯನಿಕ ಗೊಬ್ಬರಗಳು ಮೊದಲಾದವು ಭೂಮಿಯ ಮೇಲೆ ಕಾರ್ಬನ್ ಪ್ರಮಾಣ ಹೆಚ್ಚಿಸುತ್ತಿವೆ,ಇದರಿಂದ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗಿ ಭೂಮಿಯ ಮೇಲೆ ಬಿಸಿ ಹೆಚ್ಚಾಗಿದೆ. ಇದು ಜೀವಸಂಕುಲದ ನಾಶಕ್ಕೆ ಸಂಚಕಾರ ತರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗತಿಕ ತಾಪಮಾನದಿಂದಾಗಿ ಋತುಗಳು ಅಕಾಲಿಕವಾಗಿವೆ, ಮಳೆ ಅತಿಯಾಗಿ ಬಿದ್ದು ನೆರೆ ಉಂಟಾಗುತ್ತಿದೆ.ಮತ್ತೊಂದು ಕಡೆ ಬರ ಉಂಟಾಗುತ್ತಿದೆ ಎಂದರು.                                                          ಬರ ಎಂದರೆ ನೀರು ಇಲ್ಲದಿರುವಿಕೆ,ಇದು ಗಾಳಿಯಲ್ಲಿನ ನೀರು ಬಿಸಿಯಾಗಿ ಬಿಸಿ ಅಲೆಗಳನ್ನು ಸೃಷ್ಟಿಸುತ್ತದೆ.ಬಿಸಿ ಅಲೆಗಳು ಜೀವಸಂಕುಲದ ಬದುಕಿಗೆ ಮಾರಕವಾಗಿ ಪರಿಣಮಿಸಲಿವೆ ಎಂದುಬಹೇಳಿದರು.
ಮುಖ್ಯ ಅತಿಥಿ ಗುರುಸಿದ್ದಮೂರ್ತಿ ಯವರು ಮಾತನಾಡಿ ರೈತರ ಮಕ್ಕಳು ತಮ್ಮದೇ ಕ್ಷೇತ್ರದಲ್ಲಿ ಸಂಶೋಧನೆ ಮಾಡುವಂತಾಗಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಅದ್ಯಕ್ಷತೆ ವಹಿಸಿದ್ದ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಮೋನಿಕಾ ರಂಜನ್ ಅವರು ಮಾತನಾಡಿ,  ವಿಜ್ಞಾನದ ಕಲಿಕೆ ಸರಳ ಅನಿಸದಿರಬಹುದು ಆದರೆ ಅವಕಾಶಗಳು ಹೆಚ್ಚು ಮತ್ತು ಮನುಷ್ಯರಲ್ಲಿ ವೈಚಾರಿಕತೆ ಮೂಡಿಸುತ್ತದೆ ಎಂದು ತಿಳಿಸಿದರು.

    ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ್ ಎಸ್ ಪ್ರಾಸ್ತಾವಿಕ ಮಾತುಗಳಾಡಿದರು. ವಿಜ್ಞಾನ ಶಿಕ್ಷಕ ಎಸ್ ಎಂ.ಹಿರೇಮಠ ಹಾಡಿದ ವೈಜ್ಞಾನಿಕ ಜಾಗೃತಿ ಗೀತೆಗಳು ವಿದ್ಯಾರ್ಥಿಗಳನ್ನು ರಂಜಿಸುವುದರ ಜೊತೆಗೆ ಜಾಗೃತಿ ಮೂಡಿಸಿದವು.  ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಶಾಲಿನಿ.ವಿ., ಡಾ. ಶಿಲ್ಪಾ ಕುಲ್ಕರ್ಣಿ ಉಪಸ್ಥಿತರಿದ್ದರು

ಬಿ.ಎಸ್ಸಿ ಮೊದಲ ವರ್ಷದ ವಿದ್ಯಾರ್ಥಿನಿ ಹರಿಪ್ರಿಯ ಸ್ವಾಗತಿಸಿದರು. ವಿದ್ಯಾರ್ಥಿನಿ ಯು. ಅಫೀಯಾ ನಿರೂಪಿಸಿ ವಂದಿಸಿದರು. ಬಿ.ಎಸ್ಸಿ ಮೊದಲ ವರ್ಷದ ನೂರಾರು ವಿದ್ಯಾರ್ಥಿಗಳು ಇದ್ದರು.