ಕೂಡ್ಲಿಗಿ: ಜಯವಾಣಿ ನ್ಯೂಸ್ ಪೋರ್ಟಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪಟ್ಟಣಕ್ಕೆ ಆಗಮಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಶನಿವಾರ ಸಂಜೆ ಉಜ್ಜಯಿನಿ ಸದ್ಧರ್ಮ ಪೀಠಕ್ಕೂ ಭೇಟಿ ನೀಡಿದರು.
ತಗಡೂರು ಅವರು ಉಜ್ಜಯಿನಿ ಗ್ರಾಮಕ್ಕೆ ತೆರಳಿ ಸದ್ದರ್ಮ ಪೀಠದಲ್ಲಿ ಶ್ರೀ ಸಿದ್ಧಲಿಂಗ ರಾಜಕೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದಾಗ ಶ್ರೀಗಳು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್,ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ,ಜಿಲ್ಲಾ ಕಾರ್ಯದರ್ಶಿ ಭೀಮಣ್ಣ ಗಜಾಪುರ, ಜಯವಾಣಿ ಸಂಪಾದಕ ಹುಡೇಂ ಕೃಷ್ಣಮೂರ್ತಿ, ಕೂಡ್ಲಿಗಿ ಸಂಜೆವಾಣಿ ವರದಿಗಾರ ನಾಗರಾಜ್ ಮತ್ತಿತರರು ಇದ್ದರು.