ಗೃಹ ರಕ್ಷಕರು ಶಿಸ್ತಿನ ಸಿಪಾಯಿಗಳು -ಡಿವೈಎಸ್ಪಿ ವಿ. ರಘುಕುಮಾರ್

ಹೊಸಪೇಟೆ: ಗೃಹ ರಕ್ಷಕರು ಶಿಸ್ತಿನ ಸಿಪಾಯಿಗಳು ಎಂದು ಡಿವೈಎಸ್ಪಿ ವಿ. ರಘುಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಗೃಹ ರಕ್ಷಕದಳ ಘಟಕ ಶುಕ್ರವಾರ ಆಯೋಜಿಸಿದ್ದ ಬಳ್ಳಾರಿ ಜಿಲ್ಲಾ ಗೃಹರಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಪೊಲೀಸ್ ಇಲಾಖೆಗೆ ಇವರ ಸಹಕಾರ ಅನನ್ಯ. ಹಾಗೂ ಉತ್ತಮರೀತಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ತಮ್ಮದೇ ಆದ ರಕ್ಷಣಾ ತಂಡವನ್ನು ತಯಾರಿ ಮಾಡಿಕೊಂಡು ಜನರ ಪ್ರಾಣ,ಆಸ್ತಿ-ಪಾಸ್ತಿಗಳನ್ನು ಕಾಪಾಡಲು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಮಾಜಸೇವೆಯಲ್ಲಿ ತೊಡಗಿದ್ದಾರೆ ಎಂದು ಕೊಂಡಾಡಿದರು.
ಖಾಕಿ ಸಮವಸ್ತ್ರಧಾರಿಗಳಾದ ಗೃಹರಕ್ಷಕರು ಯಾವುದೇ ಸಂಘಟನೆಯಲ್ಲಿ ಪಾಲ್ಗೊಳ್ಳುವುದು ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸುವುದು ತಪ್ಪು ಮಾತ್ರವಲ್ಲ ಅಪರಾಧವೆಂದು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಘಟಕಾಧಿಕಾರಿ ಎಸ್.ಎಂ.ಗಿರೀಶ್ ಅವರು ಮಾತನಾಡಿ, ಗೃಹರಕ್ಷಕರಿಗೆ ನೀಡಿದ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಹಾಗೂ ನಿಷ್ಟೆಯಿಂದ ಮಾಡಲು ತಿಳಿಸಿದರು.
ಸಂಡೂರು ಘಟಕಾಧಿಕಾರಿ ನರಿ ಮಲ್ಲಿಕಾರ್ಜುನ ಅವರು ಮಾತನಾಡಿ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆ ಗೃಹರಕ್ಷಕದಳ ಉನ್ನತ ಸ್ಥಾನದಲ್ಲಿದೆ. ಪ್ರಕೃತಿ ವಿಕೋಪಗಳಲ್ಲಿ ಗೃಹ ರಕ್ಷಕರ ಪಾತ್ರ ಮಹತ್ವವಾದದ್ದು ಎಂದರು.
ಈ ವರ್ಷ ಮಹತ್ವದ ಕೆಲಸ ನಿರ್ವಹಿಸಿದ 27 ಗೃಹರಕ್ಷಕ ಹಾಗೂ ಗೃಹರಕ್ಷಕಿಯರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಎಂ.ಎಂ.ಹಳ್ಳಿಯ ಘಟಕಾಧಿಕಾರಿಯಾದ ಎಲ್. ವಾಲ್ಯಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಜ್ಞಾ ವಿಧಿಯನ್ನು ಪ್ಲಟೂನ್ ಕಮಾಂಡರ್ ಆದ ವಿ.ಪರಶುರಾಮ್ ರವರು ಬೋಧಿಸಿದರು. ಎಸ್.ಹನುಮಂತಪ್ಪನವರು ಅವರು ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಕಂಪ್ಲಿ ಘಟಕಾಧಿಕಾರಿಯಾದ ಮೋಹನ್ ಮೂರ್ತಿಯವರು ಹಾಗೂ ಹೊಸಪೇಟೆಯ ಎಲ್ಲಾ ಗೃಹರಕ್ಷಕರು ಹಾಗೂ ಎಲ್ಲಾ ಗೃಹರಕ್ಷಕಿಯರು ಭಾಗವಹಿಸಿದ್ದರು.