ಮತ ಜಾಗೃತಿಗಾಗಿ ಕೂಡ್ಲಿಗಿ ಪೋಲೀಸರಿಂದ ಪಥಸಂಚಲನ

ಕೂಡ್ಲಿಗಿ: ಪ್ರತಿಯೊಬ್ಬ ನಾಗರಿಕರು ಧೈರ್ಯದಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಪೊಲೀಸರು ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಮತದಾನದ ಮಹತ್ವವನ್ನು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದಲ್ಲಿ ಪಥವಸಂಚಲನ ಮೂಡಿಸಿದರು.
ಬಳಿಕ ತಾಲೂಕಿನ ಹಲವು ಗ್ರಾಮಗಳಿಗೂ ತೆರಳಿ ಪಥಸಂಚಲನದ ಮೂಲಕ ಮತದಾರರಲ್ಲಿ ಮತಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದರು. ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿರುವ ನಿಟ್ಟಿನಲ್ಲಿ ಕೂಡ್ಲಿಗಿ ತಾಲೂಕು ಚುನಾವಣೆಯ ಪೊಲೀಸ್ ನೋಡಲ್ ಅಧಿಕಾರಿ ಕೂಡ್ಲಿಗಿ ಸಿಪಿಐ ಪಂಪನಗೌಡ ನೇತೃತ್ವದಲ್ಲಿ ಕೂಡ್ಲಿಗಿ, ಗುಡೇಕೋಟೆ ಮತ್ತು ಹೊಸಹಳ್ಳಿ ಪಿಎಸ್ಐ ಗಳಾದ ತಿಮ್ಮಣ್ಣ ಚಾಮನೂರು, ರಾಮಪ್ಪ ಕಬ್ಬೇರ್ ಹಾಗೂ ನಾಗರಾಜ ಮತ್ತು ನಾಗರತ್ನ ರವರು ಹಾಗೂ 40ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಸೇರಿ ಹಿರೇಹೆಗ್ಡಾಳ್, ಹನಸಿ, ಶಿವಪುರ, ಹಿರೆಕೆರೆಯಾಗಿನಹಳ್ಳಿ, ಬಂಡ್ರಿ, ಕಾಳಿಂಗೇರಿ, ಚೋರುನೂರು, ಗುಡೇಕೋಟೆ, ಬೆಳ್ಳಗಟ್ಟ, ಹುರುಳಿಹಾಳ್, ಮಾಕನಡಕು, ಹೊಸಹಳ್ಳಿ, ತಾಯಕನಹಳ್ಳಿ, ಆಲೂರು ಮತ್ತು ಹುಡೇo ನಲ್ಲಿ ಪಥಸಂಚಲನ ನಡೆಸಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಅಕ್ರಮ ಮತದಾನ ತಡೆದು ನಿಷ್ಪಕ್ಷಪಾತವಾಗಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸುವಲ್ಲಿ ಮುಂದಾಗಬೇಕು. ಅಕ್ರಮಗಳಿಗೆ ಕಡಿವಾಣ ಹಾಕಲು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಯಾವುದೇ ಆಸೆ,ಆಮಿಷಕ್ಕೆ ಒಳಗಾಗ ಬಾರದು. ಪವಿತ್ರವಾದ ಮತದಾನದಲ್ಲಿ ಎಲ್ಲಾ ಅರ್ಹರು ಪಾಲ್ಗೊಳ್ಳಬೇಕು. ಸದಾ ನಿಮ್ಮ ರಕ್ಷಣೆಗೆ ನಾವಿದ್ದೇವೆ ನಿಮ್ಮ ಮತದ ಹಕ್ಕನ್ನು ಪ್ರತಿಯೊಬ್ಬರೂ ದೈರ್ಯದಿಂದ ಚಲಾಯಿಸಿ ಎಂದು ಪೊಲೀಸರು ಜನರಲ್ಲಿ ಪಥಸಂಚಲನದ ಮೂಲಕ ಜನ ಜಾಗೃತಿ ಮೂಡಿಸಿದರಲ್ಲದೇ ಪೊಲೀಸರು ಜನರಲ್ಲಿ ಆತ್ಮಸ್ತೈರ್ಯ ತುಂಬಿದರು.
*****