108 ಅಂಬ್ಯುಲೆನ್ಸ್ ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ: ತಾಯಿ ಮಗು ಕ್ಷೇಮ

ಕೂಡ್ಲಿಗಿ: ತಾಲೂಕಿನ ಹುರುಳಿಹಾಳು ಮ್ಯಾಸರಹಟ್ಟಿ ಗ್ರಾಮದ ತುಂಬು ಗರ್ಭಿಣಿ ರೂಪ, 108 ಅಂಬ್ಯುಲೆನ್ಸ್ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
108 ವಾಹನದ ಮಹಿಳಾ ಸಿಬ್ಬಂದಿ ಜ್ಯೋತಿ ಹಾಗೂ ವಾಹನ ಚಾಲಕ ಖಾನಾ ಸಾಬ್ ರವರ ಕರ್ತವ್ಯ ನಿಷ್ಡೆ ಹಾಗೂ ಸಮಯ ಪ್ರಜ್ಞೆಯಿಂದ ವಾಹನದಲ್ಲಿಯೇ ಯಶಸ್ವಿಯಾಗಿ ಹೆರಿಗೆಯಾಗಿದೆ.
25ವರ್ಷದ ತುಂಬು ಗರ್ಭಿಣಿ ರೂಪಾಳಿಗೆ ಹೆರಿಗೆ ಬೇನೆ ಶುರುವಾಗಿದ್ದು,ಸುದ್ದಿ ತಿಳಿದ ಕೂಡಲೇ 108 ಸಿಬ್ಬಂದಿ ವಾಹನದೊಂದಿಗೆ ಮ್ಯಾಸರಹಟ್ಟಿಗೆ ತೆರಳಿದ್ದಾರೆ. ಗರ್ಭಿಣಿಯನ್ನು ಕರೆತಂದು ಮೊದಲು ಹತ್ತಿರದ ಚಿಕ್ಕಜೋಗಿಹಳ್ಳಿ ಹಾಸ್ಪಿಟಲ್ ಗೆ ದಾಖಲಿಸಿದ್ದಾರೆ. ವೈದ್ಯರು ಪರಿಶೀಲಿಸಿ ಗರ್ಭಿಣಿಗೆ ರಕ್ತದೊತ್ತಡ ಹೆಚ್ಚಿನ ಪ್ರಮಾಣದಲ್ಲಿದ್ದು ತಕ್ಷಣ ಉನ್ನತ ವೈಧ್ಯಕೀಯ ಸೇವೆ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ ಮಾತ್ರವಲ್ಲ
ಅಗತ್ಯ ತುರ್ತು ಚಿಕಿತ್ಸೆಗಾಗಿ ತಾಲೂಕು ಮಟ್ಟದ ಆಸ್ಪತ್ರೆಗೆ ಸೂಚಿಸಿದ್ದಾರೆ.
ಕೂಡಲೇ 108ಸಿಬ್ಬಂದಿ ಗರ್ಭಿಣಿಯನ್ನು ಜಗಳೂರು ಆಸ್ಪತ್ರೆಗೆ ಹೊರಟಿದ್ದಾರೆ. ಮಾರ್ಗದಲ್ಲೇ ಆಂಬುಲೆನ್ಸ್ ನಲ್ಲಿಯೇ ರೂಪ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ತಾಯಿ ಮಗು ಆರೋಗ್ಯವಾಗಿದ್ದು ಇದನ್ನು ಖಚಿತ ಪಡಿಸಿಕೊಂಡು ಪೋಷಕರ ಆಪೇಕ್ಷೆಯಂತೆ ಸಿಬ್ಬಂದಿ ಬಾಣಂತಿ ಮಗುವನ್ನು ಚಿಕ್ಕಜೋಗಿಹಳ್ಳಿ ಆಸ್ಪತ್ರೆಗೆ ವಾಪಾಸು ಕರೆತಂದು ದಾಖಲಿಸಿದ್ದಾರೆ.
ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ,
ಜ್ಯೋತಿ ಮತ್ತು ಚಾಲಕ ಖಾಜಾ ಸಾಬ್ ಸಮಯ ಪ್ರಜ್ಞೆ, ಕಾರ್ಯಕ್ಷಮತೆಗೆ ಹಾಗೂ ಕರ್ತವ್ಯ ಪ್ರಜ್ಞೆಗೆ ಬಾಣಂತಿಯ ಪೋಷಕರು ಕೊಂಡಾಡಿದ್ದಾರೆ ಮಾತ್ರವಲ್ಲ ಅಭಿನಂದನೆ ಸಲ್ಲಿಸಿದ್ದಾರೆ. ತಾಲೂಕಿನ‌ ಜನತೆ ಕೂಡಾ ಪ್ರಶಂಸಿಸುತ್ತಿದ್ದಾರೆ.