ಬಿತ್ತನೆಗೆ ಜಿಪಿಯು ತಳಿಗಳನ್ನು ಬಳಸಿ. ಸಾಲು ಬಿತ್ತನೆ ಮಾಡಿ.
* ಎಂ ಎಲ್ 365 , ಜಿಪಿಯು 26 ತಳಿಗಳನ್ನು ಬೇಸಿಗೆಯಲ್ಲಿ ಬೆಳೆಯಬಹುದು.
* ಬಿತ್ತುವ ಮೊದಲು ಕಾರ್ಬೆಂಡೆಜಿಂ ನಿಂದ ಅಥವಾ ಟ್ರೈಕೋಡರ್ಮಾ ದಿಂದ ಬೀಜೋಪಚಾರ ಅಗತ್ಯ.
* ಎಕರೆಗೆ 40:20:20 ಕೆಜಿ ಸಾರಂಪೊ ಒದಗಿಸುವ ರಸಗೊಬ್ಬರನ್ನು ಹಂತಗಳಲ್ಲಿ ಕೊಡಬೇಕು.
* ನಾಟಿ ಮಾಡುವುದರಿಂದ ಕಳೆಗಳ ಹತೋಟಿ ಪರಿಣಾಮಕಾರಿ ಯಾಗಿ ಮಾಡಬಹುದು.
* ಪದೇ ಪದೇ ಎಡೆ ಹೊಡೆಯುವುದು ಬೆಳೆಯಲ್ಲಿ ಮರಿಗಳು ಬರಲು ಸಹಕಾರಿ.
* ಮುಂಗಾರಿನಲ್ಲಿ ಜಿಂಕ್ , ಬೋರಾನ್ ಬಳಸಿರದಿದ್ದರೆ ಈಗ ಖಂಡಿತ ಬಳಸಿ.
* ಪ್ರಧಾನ ಮತ್ತು ಲಘು ಪೋಷಕಾಂಶಗಳ ದ್ರಾವಣವನ್ನು ಮೂರು ಹಂತಗಳಲ್ಲಿ (20, 35, 50 ದಿನಗಳು) ಸಿಂಪರಿಸಬೇಕು.
* ಬೆಂಕಿ ರೋಗ ಅಥವಾ ಇಲುಕು ರೋಗ ಹತೋಟಿ ಗಾಗಿ ಬಿತ್ತುವಾಗಲೇ ಕೊಟ್ಟಿಗೆ ಗೊಬ್ಬರ ದೊಡನೆ ಟ್ರೈಕೋಡರ್ಮಾ ಬೆರೆದಿಬೆಳೆಯ ಸಾಲಿಗೆ ಕೊಡಬೇಕು.
* ಅಕ್ಕಡಿ ಅಥವಾ ಮಿಶ್ರ ಬೆಳೆಯಾಗಿ ಸಾಸುವೆ, ಅಲಸಂದೆ, ಹೆಸರು, ಉದ್ದು , ಚೆಂಡು ಹೂವು ಬೆಳೆಯಬಹುದು.
* ಬದು, ರಸ್ತೆ, ಕಾಲುವೆ ಸಹಿತ ಹೊಲಗಳು ಕಳೆ ಮುಕ್ತ ಇದ್ದರೆ ಒಳ್ಳೆಯದು