ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಹೋರಾಟ ಮಾಡುತ್ತಿರುವ, ಅಖಂಡ ಬಳ್ಳಾರಿ ಜಿಲ್ಲೆ ಪರವಿರುವ ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರನ್ನು ಬುಧವಾರ ಭೇಟಿಯಾಗಿ ಯಾವುದೇ ಕಾರಣಕ್ಕೂ ಜಿಲ್ಲೆಯ ವಿಭಜನೆ ಮಾಡದಂತೆ ಒತ್ತಾಯಿಸಿದರು.
ಬಳ್ಳಾರಿಯಲ್ಲಿ ಗಡಿಪ್ರದೇಶದಲ್ಲಿದ್ದು,ಮುಂದೊಂದು ದಿನ ಬೆಳಗಾವಿ ತರಹ ಆಗುವುದಕ್ಕೆ ಅವಕಾಶ ಮಾಡಿಕೊಡಬೇಡಿ. ಜಿಲ್ಲೆ ಒಡೆಯಬೇಡಿ ಬೇಕಾದರೇ ವಿಜಯನಗರ ಜಿಲ್ಲೆ ಅಂತ ನಾಮಕರಣ ಮಾಡಿ.
ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಒಂದು ತಮ್ಮ ಲಾಭಕ್ಕೆ ವಿಭಜನೆ ಮಾಡಬೇಡಿ ಎಂದರು.
ತಮ್ಮಿಂದ ಮಾತ್ರ ಜಿಲ್ಲೆಯ ವಿಭಜನೆ ಆಗುವುದನ್ನು ತಪ್ಪಿಸಲು ಸಾಧ್ಯ. ಸಾಧ್ಯವಾದರೇ ತಮ್ಮ ಕಾಲು ಹಿಡಿದಿಟ್ಟುಕೊಳ್ಳುತ್ತೇವೆ ಎಂದು ಹೇಳಿದರು.
ಹೋರಾಟಗಾರರೊಂದಿಗ ಅತ್ಯಂತ ಶಾಂತಚಿತ್ತದಿಂದ ಹಾಗೂ ಸಮಾಧಾನವಾಗಿ ಅವರ ಅಭಿಪ್ರಾಯಗಳನ್ನು ಸಚಿವರು ಆಲಿಸಿದರು.
ನಂತರ ಮಾತನಾಡಿದ ಅವರು ಪಶ್ಚಿಮ ತಾಲೂಕುಗಳ ಅಹವಾಲು ಕೂಡ ಆಲಿಸಿ. ಆ ಕಡೆಯಿಂದ ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿಗೆ ಆಡಳಿತಾತ್ಮಕವಾಗಿ ಕೆಲಸ ಮಾಡಿಕೊಳ್ಳುವುದಕ್ಕೆ ಬರಲು ಕಷ್ಟವಾಗುತ್ತದೆ.
ಸಣ್ಣ ಜಿಲ್ಲೆಗಳು ಆಗುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ತಮ್ಮ ಅಹವಾಲುಗಳು ಏನೇ ಇದ್ದರೂ ಆಕ್ಷೇಪಣೆಗೆ ಅವಕಾಶ ಇದ್ದು, ತಾವು ಸಲ್ಲಿಸಿ ಎಂದು ಹೇಳಿದರು.
ಮಧ್ಯಾಹ್ನ ಅತಿಥಿಗೃಹದಲ್ಲಿ ತಮ್ಮೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ತಮ್ಮ ಅಹವಾಲುಗಳನ್ನು ಆಲಿಸಲಾಗುವುದು ಎಂದು ಹೋರಾಟಗಾರರಿಗೆ ಸಚಿವರು ತಿಳಿಸಿದರು.
—