ಬಳ್ಳಾರಿ: ಕೋವಿಡ್ ಹಾಗೂ ರೂಪಾಂತರ ಕೊರೊನಾಗೆ ಸಂಬಂಧಿಸಿದಂತೆ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.
ನಗರದ ಸರಕಾರಿ ಅತಿಥಿ ಗೃಹದಲ್ಲಿ ತಮ್ಮನ್ನು ಬುಧವಾರ ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸ್ಯಾನಿಟೈಸರ್,ಮಾಸ್ಕ್ ಧರಿಸುವಿಕೆ,ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿ ಮಾಡಿ.ಬಳ್ಳಾರಿಗೆ ಬ್ರೀಟನ್ ನಿಂದ 15ಜನರು ಬಂದಿದ್ದು,ಕೋವಿಡ್ ನಿಯಮಾನುಸಾರ ಅವರಿಗೆ ಕ್ವಾರಂಟೈನ್ ಹಾಗೂ ಇತರೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕೋವಿಡ್ ಸ್ಥಿತಿಗತಿ ಹಾಗೂ ರೂಪಾಂತರ ಕೊರೊನಾ ಕುರಿತು ಚರ್ಚೆ ಮಾಡಲಿಕ್ಕೆ ಬಂದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರಕಾರದ ಗೈಡ್ ಲೈನ್ಸ್ ಅನುಸಾರ ಕ್ರಮವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಲೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವ ಸಿಂಗ್ ಅವರು ಮಕ್ಕಳ ಭವಿಷ್ಯ, ಕೋವಿಡ್ ಹಾಗೂ ರೂಪಾಂತರ ಕೊರೊನಾ ಕಣ್ಣೆದುರಿಗೆ ಬಂದಿದ್ದು,ಎಲ್ಲರೂ ಅಭಿಪ್ರಾಯಗಳನ್ನು ಆಲಿಸಿ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.
ಹಳೆಯ ವಿಮ್ಸ್ ಅಪರೇಷನ್ ಥಿಯೇಟರ್ ಡೆಮಾಲಿಷ್ ಮಾಡಿ ಡಿಎಂಎಫ್ ಅಡಿ 7ಕೋಟಿ ರೂ. ಒದಗಿಸಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ಬಳ್ಳಾರಿ ವಿಭಜನೆ ವಿರುದ್ಧದ ಹೋರಾಟಗಾರರೊಂದಿಗೆ ಚರ್ಚಿಸಲಾಗುವುದು ಮತ್ತು ಅವರ ಅಹವಾಲುಗಳನ್ನು ಆಲಿಸಲಾಗುವುದು ಎಂದರು.