ಬಳ್ಳಾರಿಯಲ್ಲಿ ಸಂಭ್ರಮದ ಕ್ರಿಸ್ ಮಸ್ ಆಚರಣೆ, ಹೆಚ್. ಹನುಮಂತಪ್ಪ ಅವರಿಗೆ ಸನ್ಮಾನ

ಬಳ್ಳಾರಿ: ಕ್ರಿಸ್ ಮಸ್ ಹಬ್ಬದ ಹಿನ್ನಲೆಯಲ್ಲಿ ನಗರದ ಮೇರಿಮಾತಾ ಚರ್ಚ್, ಕೋಟೆ ಪ್ರದೇಶದಲ್ಲಿರುವ ಕನ್ನಡ, ತೆಲುಗು ಚರ್ಚ್, ತಿಲಕ್ ನಗರದಲ್ಲಿರುವ ಬೆಥೆಲ್ ಬ್ರದರನ್ ಅಸೆಂಬ್ಲಿ ಚರ್ಚ್ನಲ್ಲಿ ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.
ಗುರುವಾರ ಮಧ್ಯರಾತ್ರಿಯಿಂದಲೇ ಸಂಭ್ರಮ, ಸಡಗರಗಳಿಂದ ಚರ್ಚ್ ಆವರಣದಲ್ಲಿ ಸೇರಿದ್ದ ಕುಟುಂಬದ ಸದಸ್ಯರ ಜತೆ ಶಾಂತಿದೂತ ಯೇಸುನನ್ನು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರು.
ಅಲ್ಲದೇ ವಿಶೇಷ ಕಾರ್ಯಕ್ರಮ ಹಾಗೂ ಪ್ರಾರ್ಥನೆ ಬಳಿಕ ಕ್ರೈಸ್ತಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕ್ರೈಸ್ತ ಧರ್ಮೀಯರು ಮನೆಗಳಲ್ಲಿ ‌ತಯಾರಿಸಿದ ಕೇಕ್ ಹಾಗೂ ಇತರ ಸಿಹಿ ತಿನಿಸುಗಳನ್ನು ಬಂಧು ಮಿತ್ರರಿಗೆ ವಿತರಿಸಿ ಹರ್ಷಿಸಿದರು.
ತಿಲಕ್ ನಗರದಲ್ಲಿರುವ ಬೆಥೆಲ್ ಬ್ರದರನ್ ಅಸೆಂಬ್ಲಿ ಪ್ರಾರ್ಥನಾ ಮಂದಿರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್. ಹನುಮಮತಪ್ಪ ಅವರು ಪಾಲ್ಗೊಂಡು ಕ್ರೈಸ್ತ ಬಾಂಧವರಿಗೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿಗಮದ ಕಾರ್ಯಕ್ರಮಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅರ್ಹರು ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಪ್ರಗತಿ ಹೊಂದಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಥೆಲ್ ಬ್ರದರನ್ ಅಸೆಂಬ್ಲಿ ಚರ್ಚ್ ಮುಖ್ಯಸ್ಥ, ನ್ಯಾಯವಾದಿ ಬಿ.ಪಾಲ್ ಪಕ್ಕೀರಪ್ಪ ಅವರು ಹನುಮಂತಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಕಮಲಾ ಬಸವರಾಜ್, ಸುಶೀಲಾ ಪಾಲ್ ಮತ್ತಿತರರು ಭಾಗವಹಿಸಿದ್ದರು.