ಸಿರಿಗೇರಿ ಜೈಭೀಮ್ ಬಾಯ್ಸ್ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿ ಯಶಸ್ವಿ

ಕುರುಗೋಡು: ಸಮೀಪದ ಸಿರಿಗೇರಿ ಗ್ರಾಮದಲ್ಲಿ ಜೈ ಭೀಮ್ ಬಾಯ್ಸ್ ವತಿಯಿಂದ ಬಾಲಕಿಯರ ಪ್ರೌಢಶಾಲೆ ಪಕ್ಕದಲ್ಲಿ ರಾತ್ರಿ ಕಬ್ಬಡಿ ಪಂದ್ಯಾವಳಿ ನೆಡಸಲಾಯಿತು.
ಪಂದ್ಯಾವಳಿಯಲ್ಲಿ 26 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ 10ಸಾವಿರ ಒಂದು ಕಪ್, ದ್ವಿತೀಯ ಬಹುಮಾನ 5 ಸಾವಿರ ಒಂದು ಕಪ್ ನೀಡಲಾಯಿತು,
ಪ್ರಥಮ ಸ್ಥಾನ ತೆಕ್ಕಲಕೋಟೆ ಸವೆನ್ ಸ್ಟಾರ್ ತಂಡ ಗಳಿಸಿತು. ದ್ವಿತೀಯ ಸ್ಥಾನ ಶಿಂದಿಗೇರಿ ತಂಡ ಪಡೆಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಎಸ್. ರಾಮಚಂದ್ರ ಪ್ಪ, ಬಿಚ್ಚುಗತ್ತಿ ಮಲ್ಲಯ್ಯ, ಎ. ಕೆ.ಗಾದಿಲಿಂಗಪ್ಪ, ಕೊಳ್ಳಿ ಪಾವಡಿ ನಾಯಕ, ಹೆಚ್ ಭೀಮೇಶ್, ಮಲ್ಲಿಕಾರ್ಜುನ, ಬಿ ಈರೇಶ್, ನಾಗರಾಜ ,ನೆನಕ್ಕಿ ವಿರುಪಾಕ್ಷಿ, ಲಕ್ಷ್ಮಣ ಭಂಡಾರಿ,
ಶ್ರೀರಾಮ, ಬಿಚ್ಚು ಗತ್ತಿ ಹನುಮಂತ, ಹಳ್ಳಿ ಮರದ ಹನುಮಂತ,ರವಿ, ಹಾಗೂ ಜೈ ಭೀಮ್ ಬಾಯ್ಸ್ ಬಳಗದ ಯುವಕರು, ಕ್ರೀಡಾ ಅಭಿಮಾನಿಗಳು ಇದ್ದರು.