ಜ.2ರಂದು ರಾಣೇಬೆನ್ನೂರಿನಲ್ಲಿ ‘ದೇವರಿಗೂ ಬೀಗ’ ಕೃತಿ ಲೋಕಾರ್ಪಣೆ

ರಾಣೆಬೆನ್ನೂರು: ಲೇಖಕ, ವ್ಯಂಗ ಚಿತ್ರಕಾರ ನಾಮದೇವ ಕಾಗದಗಾರ ಅವರ ಮೊದಲ ಕೃತಿ ‘ದೇವರಿಗೂ ಬೀಗ’
ಜ. 2 ರಂದು ಶನಿವಾರ ಲೋಕಾರ್ಪಣೆಗೊಳ್ಳಲಿದೆ.
ಕಾಗದ ಸಾಂಗತ್ಯ ವೇದಿಕೆ ಹಾಗೂ ಗದಗಿನ ಧನ್ಯಾ ಪ್ರಕಾಶನದ ಸಹಯೋಗದಲ್ಲಿ ನಗರದ ಹಲಗೇರಿ ರಸ್ತೆಯಲ್ಲಿರುವ ಬಿ.ಎ.ಜೆ.ಎಸ್.ಎಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಅಂದು ಬೆ. 10-30ಕ್ಕೆ ಕೃತಿ ಬಿಡುಗಡೆಗೊಳ್ಳಲಿದೆ.
ಹಾವೇರಿಯ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ವೆಂಕಟಗಿರಿ ದಳವಾಯಿ ಅವರು ಕೃತಿ ಬಿಡುಗಡೆಗೊಳಿಸುವರು.
ಹೊಸಪೇಟೆ ಎಸ್ ಎಸ್ ಎ ಎಸ್ ಸರಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೆ ವೆಂಕಟೇಶ ಅವರು ಕೃತಿ ಕುರಿತು ಮಾತನಾಡುವರು.
ರಾಣೇಬೆನ್ನೂರಿನ ಬಿ.ಎ.ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಆರ್.ಎಮ್.ಕುಬೇರಪ್ಪ ರವರು ವಿಶೇಷ ಆಹ್ವಾನಿತರಾಗಿ, ಸಾಹಿತಿ, ಪತ್ರಕರ್ತ, ಎಂ.ಮಂಜುನಾಥ ಬಮ್ಮನಕಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸಂಘಟಕರೂ ಆಗಿರುವ ನಾಮದೇವ ಕಾಗದಗಾರ ಅವರು ತಿಳಿಸಿದ್ದಾರೆ.