ಬಳ್ಳಾರಿ: ಜಿಲ್ಲೆಯ ವಿಭಜನೆ ವಿರೋಧಿಸಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನಗರದ ಜಿಲ್ಲಾಧಿಕಾರಿ ಮುಂದೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಡಿ.28ಕ್ಕೆ 15 ದಿನಗಳನ್ನು ಪೂರೈಸಿತು.
ಸೋಮವಾರ ಜಿಲ್ಲೆ ವಿಭಜನೆ ಕೈ ಬಿಡುವಂತೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ಧಷ್ಟಾವಧಿ ಧರಣಿಗೆ ಬೆಂಬಲವಾಗಿ ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾ ಪಧಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡು ಯಾವದೇ ಕಾರಣಕ್ಕೆ ಜಿಲ್ಲೆ ವಿಭಜನೆಯಾಗಬಾರದು ಅಖಂಡ ಜಿಲ್ಲೆಯಾಗಿಯೇ ಉಳೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಮುಷ್ಕರದ ನೇತೃತ್ವವನ್ನು ಬಳ್ಳಾರಿ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಸಿ. ನರಸಪ್ಪ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನರಸಪ್ಪ ಅವರು ಬಳ್ಳಾರಿ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಬಾರದು. ಜಿಲ್ಲೆ ಅಖಂಡವಾಗಿರಬೇಕು ಎಂದು ಆಗ್ರಹಿಸಿದರು.
ಬಳಿಕ ಪದಾಧಿಕಾರಿಗಳ ಜತೆ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಟ ಸಭಾದ ಮಾಜಿ ಜಿಲ್ಲಾಧ್ಯಕ್ಷ ಡಿ. ಸೂರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಜೆ.ಎಸ್. ಶ್ರೀನಿವಾಸಲು, ನಿರ್ದೇಶಕರಾದ ಮಾವಿನಹಳ್ಳಿ ಸಿದ್ದಬಸಪ್ಪ, ಎಂ. ಹಂಪಯ್ಯ, ಟಿ. ಸುಂಕಪ್ಪ, ಡಿ. ಹೆಚ್. ಹನುಮೇಶಪ್ಪ, ಜಯಣ್ಣ, ನಾಗಲಾಕೇರಿ ಗೋವಿಂದ,
ಈ. ತಿಮ್ಮಪ್ಪ, ಡಿ. ಸೂರ್ಯನಾರಾಯಣ, ಸಿ. ಶ್ರೀನಿವಾಸ್, ವಸಂತ, ಕಪ್ಪಗಲ್ಲು ಲೋಕೇಶ್, ಕುರುವಳ್ಳಿ ಶೇಖರ್, ಡಿ. ವೆಂಕಟೇಶ್, ಯಲ್ಲಪ್ಪ, ಜಯರಾಮ್, ರಾಮಕೃಷ್ಣ, ಕೇಶಪ್ಪ, ಉಮೇಶ್ ಮತ್ತಿತರರು ಭಾಗವಹಿಸಿದ್ದರು.