ವಿ ಎಸ್ ಕೆ ವಿವಿ 8ನೇ ಘಟಿಕೋತ್ಸವ: ಗಳಿಸಿದ ಜ್ಞಾನ ರಾಷ್ಟ್ರದ ಅಭಿವೃದ್ಧಿಗೆ ಸಮಾಜದ ಒಳಿತಿಗೆ ಬಳಸಿ:ಪ್ರೊ.ರಜನೀಶ್ ಜೈನ್

ಬಳ್ಳಾರಿ: ವಿಶ್ವವಿದ್ಯಾಲಯದಲ್ಲಿ ಗಳಿಸಿದ ಜ್ಞಾನವನ್ನು ಮಾನವೀಯತೆಯೊಂದಿಗೆ ಬೆಸೆದು ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಮತ್ತು ಸಮಾಜದ ಒಳಿತಿಗೆ ಗಣನೀಯ ಕೊಡುಗೆಯನ್ನು ನೀಡಲು ಮುಂದಾಗಬೇಕು ಎಂದು ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಕಾರ್ಯದರ್ಶಿಗಳಾದ ಪ್ರೊ.ರಜನೀಶ್ ಜೈನ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿವಿಯ 8ನೇ ಘಟಿಕೋತ್ಸವದಲ್ಲಿ ಆನ್‍ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು.
ಓರ್ವ ಸಾಮಾನ್ಯನು ತನ್ನ ಜೀವನದ ಸವಾಲುಗಳನ್ನು ಎದುರಿಸುವ ಸಾಮಥ್ರ್ಯ ಪಡೆದುಕೊಳ್ಳುವ, ಚಾರಿತ್ರ್ಯದ ದೃಢತ್ವವನ್ನು ಹೊರೆಸೆಳೆಯುವ, ತನ್ನನ್ನು ತಾನು ಪರಿಪೂರ್ಣ ವ್ಯಕ್ತಿಯಾಗಿ ಸ್ವಯಂ ನಿರ್ಮಿಸಿಕೊಳ್ಳಲು ಬೇಕಾಗುವ ಮಹತ್ವಾಕಾಂಕ್ಷೆ ಮತ್ತು ಧೈರ್ಯ ಇವೆಲ್ಲವುಗಳನ್ನು ಒದಗಿಸುವ ಶಿಕ್ಷಣ ವ್ಯವಸ್ಥೆಯನ್ನು ಪಡೆಯುವ ಅಗತ್ಯತೆ ನಮಗಿದೆ ಎಂದು ಅವರು ಪ್ರತಿಪಾದಿಸಿದರು.
ಜಾಗತಿಕ ಆಸಕ್ತಿಯಲ್ಲಿ ಭಾರತವು ಹುರುಪಿನ ಜ್ಞಾನ ಸಮಾಜದ ಮತ್ತು ಆರ್ಥಿಕತೆಗಾಗಿ ಶ್ರಮಿಸುತ್ತಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿ ಮುಂದಿನ ತಲೆಮಾರಿನ ಪ್ರಸ್ತುತತೆ ಮತ್ತು ಭವಿಷ್ಯದ ತಂತ್ರಜ್ಞಾನಗಳು ಉದ್ಯೋಗಗಳ ಸರಾಸರಿಯನ್ನು ಹಾಗೂ ಅದರ ಬಹುಮುಖಿ ಅವಕಾಶಗಳಲ್ಲಿ ಹೆಚ್ಚಿಸುತ್ತದೆ. ಅದರಂತೆಯೇ, ನಮ್ಮ ಉನ್ನತ ಶಿಕ್ಷಣವು ಜನರಿಗೆ ಇಂತಹ ಪ್ರಧಾನವಾದ ಆಕಾಂಕ್ಷೆಗಳನ್ನು ಕಲ್ಪಿಸುವಲ್ಲಿ ಮರು-ಕಲ್ಪಿಸುವ ಮರು ಕೇಂದ್ರಿಸುವ, ಪರಿಷ್ಕರಿಸುವ ಮತ್ತು ಮರುಶಕ್ತಿ ಹೊಂದುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಆದರೆ ಬಹು ಮುಖ್ಯವಾದ ಭಾಗವೆಂದರೆ, ನಮ್ಮ ಉನ್ನತ ಶಿಕ್ಷಣವು ಯುವ ಪೀಳಿಗೆಯನ್ನು, ಚಾರಿತ್ರ್ಯ, ನೈತಿಕ ಮತ್ತು ಸಾಂವಿಧಾನಿಕ ಮೌಲ್ಯಗಳು, ಬೌದ್ಧಿಕ ಕುತೂಹಲ, ಬದ್ಧತೆಯ ಸೂಕ್ಷ್ಮತೆ, ಸೇವಾ ಮನೋಭಾವ ಇದೇ ಮೊದಲಾದ ಅಂಶಗಳನ್ನು, 21ನೇ ಶತಮಾನದ ಎಲ್ಲ ರೀತಿಯ ಶಿಸ್ತುಗಳ ಮೂಲಕ ತನ್ನ ಸಾವiಥ್ರ್ಯಗಳನ್ನು ರೂಪಿಸಿಕೊಳ್ಳಬೇಕಾಗಿದೆ ಎಂದರು.
ಕೇಂದ್ರ ಸರಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯು ಭವಿಷ್ಯಾಧಾರಿತ ಸಮಗ್ರ, ಸಂಯೋಜಿತ, ಪ್ರಯೋಗಾತ್ಮಕ ಕಲಿಕಾ ಕೇಂದ್ರವಾಗಿದ್ದು ಸಕಾರಾತ್ಮಕ ಸುಧಾರಣೆಗಳ ಮೂಲಕ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೆಚ್ಚು ಶಕ್ತಿ ತುಂಬುವ ಪರಿಯಾಗಿದೆ. ಈ ಸುಧಾರಣೆಯು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಪರಿವರ್ತನೆಯನ್ನು ತರುವ ಭರವಸೆ ಇದೆ ಎಂದು ಹೇಳಿದರು.
ಈ ಶೈಕ್ಷಣಿಕ ವ್ಯವಸ್ಥೆಯಲ್ಲಿ 21ನೇ ಶತಮಾನದ ಆದ್ಯತೆಗಳನ್ನು ಅಳವಡಿಸಿಕೊಂಡಿದೆ. ಇದು ಮೂಲಭೂತ ಸೌಕರ್ಯಗಳನ್ನೊಳಗೊಂಡಿದ್ದು ಸಮಾನತೆ ಒಳಗೊಳ್ಳುವಿಕೆ ಹೊಂದಿದ್ದು ಮತ್ತು ಕೈಗೆಟುಕುವುದಾಗಿದ್ದು, ಹೆಚ್ಚಿನ ಗುಣಮಟ್ಟದ ಸ್ವಾಯತ್ತತೆ ಹಾಗೂ ಉತ್ತರದಾಯಿತ್ವ ಹೊಂದಿದೆ. ಈ ಶಿಕ್ಷಣ ನೀತಿಯು ಸಮೃದ್ಧ ಭಾರತೀಯ ಜ್ಞಾನದ ವ್ಯವಸ್ಥೆ, ಭಾಷೆ, ಕಲೆ ಹಾಗೂ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಪ್ರಮುಖ ಲಕ್ಷಣವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯರೂಪಕ್ಕೆ ತರುತ್ತಿದ್ದಂತೆಯೇ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಜಾಗತಿಕ ಮಟ್ಟದಲ್ಲಿಯೇ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ಹೊಂದುವುದೆಂಬ ವಿಶ್ವಾಸ ನನಗಿದೆ ಎಂದು ಅವರು ಹೇಳಿದರು.
ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು ಉನ್ನತ ಶಿಕ್ಷಣವನ್ನು ಹೆಚ್ಚು ಫಲಪ್ರದವಾಗಿಸಲು ಸತತವಾಗಿ ಸುಸ್ಥಿರ ಪ್ರಯತ್ನವನ್ನು ಮಾಡುತ್ತಾ ವಿವಿಧ ಉಪಕ್ರಮಗಳನ್ನು ಮುಂದಿಟ್ಟಿದೆ. ಗುಣಮಟ್ಟದ ಕಟಿಬಧ್ಧತೆ, ಶೈಕ್ಷಣಿಕ ಸಂಸ್ಥೆಗಳಿಗೆ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಪ್ರಯೋಜನಗಳ ವ್ಯವಸ್ಥೆಗಳನ್ನು ಹಮ್ಮಿಕೊಂಡಿದೆ ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳೇ ತಮ್ಮ ಮುಂಬರುವ ಜೀವನವು ಹೆಚ್ಚಿನ ಉತ್ಸುಕತೆಯಿಂದ, ಅನ್ವೇಷಣೆಯಿಂದ ಕೂಡಿರುತ್ತದೆ, ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗೇಯೇ ಅವಕಾಶಗಳನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ. ತಾವುಗಳು ತಮ್ಮ ಜೀವನ ಶೈಲಿಯಲ್ಲಿ ಭೌತಿಕ, ಮಾನಸಿಕ ಸಮತೋಲನ ಕಾಪಾಡಿಕೊಳ್ಳುತ್ತಾ ಸಂಬಂಧಗಳನ್ನು ಗೌರವಿಸುತ್ತಾ ತಮ್ಮ ಕಾರ್ಯ ವೈಖರಿಗಳನ್ನು ಹೆಚ್ಚು ಹೆಚ್ಚು ಫಲದಾಯಕವನ್ನಾಗಿ ಮಾಡಿಕೊಳ್ಳಬೇಕು;ಅದಕ್ಕಾಗಿ ಸತ್ಯ, ಸಮರ್ಥತೆ, ಸಂಕಲ್ಪ, ಸಂಯಮ ಮತ್ತು ಸಂವೇದನಾ ಶೀಲತೆ ಎಂಬ ಪ್ರಮುಖ ಮಾರ್ಗದರ್ಶಿ ಲಕ್ಷಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಗೌರವ ಡಾಕ್ಟರೇಟ್ ಪ್ರದಾನ: ಮಂತ್ರಾಲಯದ ಆಡಳಿತಾಧಿಕಾರಿ ಎಸ್.ಗಿರಿ ಆಚಾರ್ಯ ಅವರಿಗೆ ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಪಿ.ಆಲಗೂರು ಅವರು ಸ್ವಾಗತ ಭಾಷಣ ಮಾಡಿ ವಿಶ್ವವಿದ್ಯಾಲಯದ ಸಂಕ್ಷಿಪ್ತ ವರದಿಯನ್ನು ಈ ಸಂದರ್ಭದಲ್ಲಿ ವಾಚಿಸಿದರು.
ಘಟಿಕೋತ್ಸವದಲ್ಲಿ 8065 ವಿದ್ಯಾರ್ಥಿಗಳು ಸ್ನಾತಕ ಪದವಿ, 1585 ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿ ಹಾಗೂ 43 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಸೇರಿದಂತೆ ವಿಶ್ವವಿದ್ಯಾಲಯವು 9693 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ.ಬಿ.ಕೆ.ತುಳಸಿಮಾಲ, ಮೌಲ್ಯಮಾಪನ ವಿಭಾಗದ ಪ್ರೊ. ಶಶಿಕಾಂತ ಎಸ್.ಉಡಿಕೇರಿ ಸೇರಿದಂತೆ ಸಿಂಡಿಕೆಟ್ ಸದಸ್ಯರು, ವಿದ್ಯಾ ವಿಧಾಯಕ ಪರಿಷತ್ ಸದಸ್ಯರು ಹಾಗೂ ವಿವಿಧ ನಿಕಾಯಗಳ ಡೀನ್ ಉಪಸ್ಥಿತರಿದ್ದರು.