ಅನುದಿನ ಕವನ -೦೨

ವಿಚಾರವಾದಿ ಸಾಹಿತಿ, ನಿವೃತ್ತ ಬ್ಯಾಂಕಿನ ಹಿರಿಯ ಅಧಿಕಾರಿ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಇಂದು ತಮ್ಮ ೬೯ನೆಯ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಡಾ. ಅಪ್ಪಗೆರೆ ಅವರ ‘ಒಗಟು’ ಕವನವನ್ನು ಪ್ರಕಟಿಸುವುದರ ಮೂಲಕ ಶ್ರೀಯುತರಿಗೆ ಪ್ರೀತಿಯ ಶುಭಾಶಯ ಕೋರುತ್ತದೆ.(ಸಂಪಾದಕರು)

ಒಗಟು
*********
ನಮ್ಮ ನಾಡು ಪುಣ್ಯದ ಜನ್ಮ ತಾಣ
ಸತ್ಯ -ಧರ್ಮಗಳ ಆಗರ ಸ್ಥಾನ
ಸಕಲ ಕೋಟ್ಯಾನು ದೇವತೆಗಳ ವಾಸಸ್ಥಾನ
ಸಾಧು ಸಂತರ ತುಂಬಿದ ಬೀಡು
ಬಾಬ-ದೇವಮಾನವರ ನೆಲೆವೀಡು
ಮುಷ್ಟಿಯಲ್ಲಿ ಮೂವತ್ತು ಸಾವಿರ ಮೌಲ್ಯದ
ಚಿನ್ನದ ಸರ ‘ಸೃಷ್ಟಿ’ಸುವ ಪವಾಡ ಪುರುಷರ ನಾಡು
ಬೊಗಸೆಯಲ್ಲಿ ಹಸಿದ ಹೊಟ್ಟೆಗೆ
ಮೂರು ಕಾಸಿನ ‘ಅಂಬಲಿ’ ಸೃಷ್ಟಿಸಲಾಗದದವರ ವೀಡು
ನಾಸ್ತಿಕ ರಾಷ್ಟ್ರ ರಷ್ಯಾ, ಜರ್ಮನಿ, ಫ್ರಾನ್ಸ್ ಗಳು ಮುನ್ನಡೆದಿವೆ ನೋಡು
ಆಸ್ತಿಕ ರಾಷ್ಟ್ರ ನಮ್ಮದು, ಎಲ್ಲೆಲ್ಲೂ ಬಡತನ, ಅನಾರೋಗ್ಯ, ಅನಕ್ಷರತೆ ಏಕೆ? ಹೇಳು?
-ಡಾ. ವೆಂಕಟಯ್ಯ ಅಪ್ಪಗೆರೆ

(ಒಗಟಿಗೆ ಉತ್ತರವನ್ನು ಕವಿಗಳೇ ನೀಡಿದ್ದಾರೆ!)
ಉತ್ತರ:
ವಿಜ್ಞಾನ, ತಂತ್ರಜ್ಞಾನದ ವಿದ್ಯೆಯ ನಂಬಿಹ ರಾಷ್ಟ್ರಗಳು ಅವು,
ಕಣ್ಣಿಗೆ ಕಾಣದ, ಮಿಥ್ಯೆಯ ನಂಬಿರುವೆವು ನಾವು.