ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಗೆ ಕಜಾಪ ಸನ್ಮಾನ

ಹೊಸಪೇಟೆ: ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಮಾತಾ ಮಂಜಮ್ಮ ಜೋಗತಿ ಅವರನ್ನು ಶನಿವಾರ ಸಂಜೆ ಸನ್ಮಾನಿಸಿ ಗೌರವಿಸಿತು.
ಮಂಜಮ್ಮ ಅವರ ಮರಿಯಮ್ಮನಹಳ್ಳಿ ನಿವಾಸಕ್ಕೆ ತೆರಳಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಬಾಲಾಜಿ ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಕಜಾಪ ರಾಮನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ ಸಿ ಕಾಂತಪ್ಪ, ಹಗರಿಬೊಮ್ಮನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಅಂಬಳಿ ಕೇಶವ ಮೂರ್ತಿ , ಜಾನಪದ ಯೂಥ್ ಬ್ರಿಗೇಡ್ ಸಂಚಾಲಕ ರಘು ಹಾಗೂ ಸಂತೋಷ್ ಇದ್ದರು.
ಬೆಂಗಳೂರಿನಿಂದ ವಿಜಯಪುರಕ್ಕೆ ಪರಿಷತ್ತಿನ ಕಾರ್ಯಕ್ರಮವೊಂದದಲ್ಲಿ ಪಾಲ್ಗೊಳ್ಳಲು ಡಾ. ಬಾಲಾಜಿ ಮತ್ತು ಪದಾಧಿಕಾರಿಗಳು ತೆರಳುತ್ತಿದ್ದ ಸಂದರ್ಭದಲ್ಲಿ ಮಂಜಮ್ಮ ಜೋಗತಿ ಅವರನ್ನು ಭೇಟಿ ಮಾಡಿ ಸತ್ಕರಿಸಿದರು.