ಅನುದಿನ ಕವನ-೦೮

ನೀ ಸರ್ವರಿಗೂ ಸೇರಿದವ….

ನೀ ಬಂದೆ ಭೀಮಾ
ಮಹಾರಾಷ್ಟ್ರದ ಮಹಾರಾಜನಾಗಿ
ನೀ ಬಂದೆ ಭೀಮಾ
ಬಾಳು ಬೆಳಗಿತು ಭೀಮೆಯರದ್ದು

ನೀ ಬಂದೆ ಭೀಮಾ
ಶೋಷಿತರು ಬೆಳಗಿದರು
ನೀ ಬಂದೆ ಭೀಮಾ
ಗುಲಾಮಗಿರಿ ತೊಲಗಿತ್ತು

ನೀ ಬಂದೆ ಭೀಮಾ
ಬುದ್ದ,ಬಸವನ ಹಾದಿ ತೋರಿಸಿದೆ
ನೀ ಬಂದೆ ಭೀಮಾ
ಸ್ವಚ್ಚಂದವಾಯಿತು ನೊಂದ ಜೀವಗಳ ಬದುಕು

ನೀ ಬಂದೆ ಭೀಮಾ
ಸರ್ವರಿಗೂ ಜ್ಯೋತಿಯಾಗಿ
ನೀ ಬಂದೆ ಭೀಮಾ
ಎಲ್ಲರಿಗೂ ಬದುಕುವ ಹಕ್ಕು ಇದೆ ತೋರಿಸಿದೆ

ನೀ ಬಂದೆ ಭೀಮಾ
ಎಲ್ಲರೂ ಸಮಾನರು ಎಂದೆ
ನೀ ಬಂದೆ ಭೀಮಾ
ತುಳಿದ ಜಾಗದಲ್ಲಿ ಎದ್ದು ನಿಲ್ಲಿ ಎಂದೆ

ನೀ ಬಂದೆ ಭೀಮಾ
ದೇಶ ಹೇಗೆ ನಡೆಯಬೇಕು ಎಂದು ತೋರಿಸಿದೆ
ಇತಿಹಾಸ ಸೇರಿದೆ

ನೀ ಬಂದೆ ಭೀಮಾ
ಭಾರತ ಭಾಗ್ಯವಿಧಾತ ಆದೆ,
ನೀನು ಇಲ್ಲದೆ ಹೋಗಿದ್ದರೆ
ನಾವು ಪ್ರಾಣಿಗಳಿಗಂತೆ ಆಗುತ್ತಿದ್ದೆವು

ನಿನ್ನ ಶ್ರಮ, ನಿನ್ನ ಕಠಿಣ ನಿರ್ಧಾರ
ಒಲವಾಗಿದೆ ನಮಗೆ
ನೀ ಒಂದು ಜಾತಿಗೆ ಸೀಮಿತ ಅಲ್ಲ
ಭೀಮಾ ನೀ ಮಾನವೀಯತೆಯ ಹರಿಕಾರ

ನಾನು ಹೇಳುವೆ ಸಾರಿ ಸಾರಿ
ನೀ ಸರ್ವರಿಗೂ ಸೇರಿದೆವ
ನೀ ವಿಶ್ವವನ್ನೆ ಬೆಳಗುವ ಸೂರ್ಯ…

ಬಿಂದು ಆರ್.ಡಿ ರಾಂಪುರ
ಹವ್ಯಾಸಿ ಲೇಖಕಿ