ಹಳೇ ದರೋಜಿಯಲ್ಲಿ ಮಾತಾ ಮಂಜಮ್ಮ, ಡಾ.ಕೆ. ನಾಗರತ್ನಮ್ಮರಿಗೆ ಸತ್ಕಾರ

ಸಂಡೂರು: ತಾಲೂಕಿನ ಹಳೇ ದರೋಜಿ ಗ್ರಾಮದ ನಾಡೋಜ ಬುರ್ರಕಥಾ ಈರಮ್ಮ ಸ್ಮಾರಕ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಾತಾ ಮಂಜಮ್ಮ ಜೋಗತಿ ಹಾಗೂ ಹಿರಿಯ ರಂಗಕಲಾವಿದೆ ಡಾ.ಕೆ. ನಾಗರತ್ನಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ, ಶ್ರೀಮತಿ ರಾಮಣ್ಣ, ಫೌಂಡೇಶನ್ ಅಧ್ಯಕ್ಷ ಡಾ.ಅಶ್ವ ರಾಮು ದಂಪತಿ ಹಿರಿಯ ಕಲಾವಿದರಿಬ್ಬರನ್ನು ಉಡಿ ಅಕ್ಕಿ ಗೌರವದ ಮೂಲಕ ಸತ್ಕರಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಬಳ್ಳಾರಿ ಬುಡ್ಗಜಂಗಮ ಸಮಾಜದ ಜಿಲ್ಲಾಧ್ಯಕ್ಷ ವಿ.ರಾಮುಡು, ಕೊಪ್ಪಳ ಜಿಲ್ಲಾಧ್ಯಕ್ಷ ಮೀರಾಲಿ ಶಿವಲಿಂಗಪ್ಪ, ಕಲಿಕೇರಿ ಚಿನ್ನಪ್ಪ, ಎಡವಲಿ ರಾಮಣ್ಣ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನಪ್ಪ ಮತ್ತು ಬುರ್ರಕಥಾ ಶಿವಮ್ಮ, ಪಾರ್ವತಮ್ಮ, ಗಂಗಾಧರಪ್ಪ, ಅಶ್ವ ನಾಗರಾಜ, ಅಶ್ವ ಸುರೇಶ ಮತ್ತಿತರರು ಉಪಸ್ಥಿತರಿದ್ದರು.