ಜ.9ರಂದು ಹೊಸಪೇಟೆಗೆ ತೆಲಂಗಾಣದ ಹಿರಿಯ ಐಪಿಎಸ್ ಅಧಿಕಾರಿ ಆರ್ ಎಸ್ ಪ್ರವೀಣ್ ಕುಮಾರ್

ಹೊಸಪೇಟೆ: ತೆಲಂಗಾಣದ ಹಿರಿಯ ಐಪಿಎಸ್ ಅಧಿಕಾರಿ, ಸ್ವೆರೋಸ್ ನೆಟ್ ವರ್ಕ್ ಅಧ್ಯಕ್ಷ ಡಾ. ಆರ್ ಎಸ್. ಪ್ರವೀಣ್ ಕುಮಾರ್ ಅವರು ಜ.9ರಂದು ಶನಿವಾರ ಹೊಸಪೇಟೆಗೆ ಆಗಮಿಸಲಿದ್ದಾರೆ.
ಸ್ವೆರೋಸ್ ಕರ್ನಾಟಕ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಬಳ್ಳಾರಿ ಜಿಲ್ಲಾಮಟ್ಟದ ಸಮಾವೇಶದಲ್ಲಿ ಡಾ. ಪ್ರವೀಣ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಅರುಣ್ ಚಕ್ರವರ್ತಿ ಅವರು ಸಮಾವೇಶಕ್ಕೆ ಚಾಲನೆ‌ ನೀಡುವರು.
ಸಖಿ ಸಂಸ್ಥೆಯ ಡಾ.ಭಾಗ್ಯಲಕ್ಷ್ಮಿ ಅವರು ಅದ್ಯಕ್ಷತೆ ವಹಿಸುವರು.
ಸಮಾವೇಶದಲ್ಲಿ ಸ್ವೆರೋಸ್-ಕರ್ನಾಟಕ ನೆಟ್ವರ್ಕ್ ಉಸ್ತುವಾರಿ ಪ್ರೊ. ಆರ್ ವಿ ಚಂದ್ರಶೇಖರ್, ಬಳ್ಳಾರಿ ಜಿಲ್ಲಾ ಸಂಚಾಲಕಿ ಮಂಜುಳಾ ಮಾಳ್ಗಿ, ಪ್ರೊ.ಪ್ರದೀಪ್ ರಮಾವತ್, ಕೆಎಎಸ್ ಅಧಿಕಾರಿ ಭಾಗ್ಯಲಕ್ಷ್ಮಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮರಿಯಮ್ಮನಹಳ್ಳಿಗೂ ಭೇಟಿ: ಜಿಲ್ಲಾ ಸಮಾವೇಶಕ್ಕೂ ಮೊದಲು ಡಾ. ಆರ್ ಎಸ್ ಪ್ರವೀಣ್ ಕುಮಾರ್ ಅವರು ತಾಲೂಕಿನ ಮರಿಯಮ್ಮನಹಳ್ಳಿ ಸ್ವೆರೋಸ್ ಸಮುದಾಯ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.