ಭೂಮಿ ಬದುಕುತ್ತಿದೆ……..|?
ಡಾ.ಆರ್.ಚೇತನಕುಮರ ಕುಡಿತಿನಿ
ಬದುಕುತ್ತಿದೆ ಭೂಮಿ………|
ಭುವಿಯಲ್ಲಿ ಜನಿಸಿದ
ಜೀವತತಿಗಳ ಜೀವ ನುಂಗಿ,
ದೇಹಗಳ ಮುಕ್ಕುತ್ತ ಭೂಮಿ ಬದುಕುತ್ತಿದೆ…..||
ಕುರಿ-ಕೋಳಿ ಕೋಣ-ಎತ್ತು-ಎಮ್ಮೆ ಸಾಕಿ,
ಆಹಾರ-ನೀರುಣಿಸಿ ಪೋಷೀಸಿ,
ಬೇಕೆನಿಸಿದಾಗ ಕತ್ತುಕೊಯ್ದು ತಿಂದAತೆ ನಾವು……..|
ಬದುಕುತ್ತಿದೆ ಭೂಮಿ,
ಕೊಂದು ತಿಂದು ನಮ್ಮನ್ನು………||
ಗೆಡ್ಡೆ-ಗೆಣಸು,
ಕೊತ್ತಂಬರಿ, ತರಕಾರಿ ಬೀಜ ನೆಟ್ಟು,
ನೀರು-ಗೊಬ್ಬರ ಕೊಟ್ಟು,
ಬೇಲಿ ಹಾಕಿ ಬೆಳೆಸಿ ಕಾಯ್ದು,
ಹಸಿವೆಗೊಂಡಾಗ……….
ಕಿತ್ತು ತರಿದು ತಿಂದಂತೆ ನಾವು……….|
ಭೂಮಿಯೂ, ನಮ್ಮನ್ನು ತಿಂದು ಬದುಕುತ್ತಿದೆ……….||
ಪಾಪ, ಪ್ರಾಣಿಗಳಿಗೇನು ಗೊತ್ತು……….?|
ಒಡೆಯ ತಮ್ಮನ್ನು ಸಾಕುತ್ತಿರುವುದು,
ತಮ್ಮ ಮೇಲಿನ ಪ್ರೀತಿ-ಕರುಣೆಯಿಂದ ಅಲ್ಲಾಂತ |
ಗೆಡ್ಡೆ-ಗೆಣಸು ಕೊತ್ತಂಬರಿ, ಕಾಯಿ-ಪಲ್ಲೆ
ತರಕಾರಿಗಳಗೇನು ಗೊತ್ತು…..?
ಒಡೆಯ ಬೀಜನೆಟ್ಟು ನೀರು-ಆಹಾರಕೊಟ್ಟು,
ಕಾಯ್ದು ಬೆಳೆಸುತ್ತಿರುವುದು
ತಮ್ಮ ಮೇಲಿನ ಪ್ರೀತಿಯಿಂದಲ್ಲಾಂತ………|
-೨-
ನಮಗೇನು ಗೊತ್ತು…………?||
ಪ್ರಾಣಿ-ಪಕ್ಷಿ, ತರಕಾರಿ ಬೆಳೆಸಿ
ಕೊಯ್ದು-ಕೊರೆದು, ತರಿದು ತಿಂದAತೆ ನಾವು
ಭೂಮಿಯೂ ಬದುಕುತ್ತಿದೆ………..
ನಮಗೆ ಜನ್ಮ, ಅನ್ನ-ಆಹಾರ ನೀರು,
ಆಶ್ರಯಕೊಟ್ಟು ಕಾಯ್ದು,
ಕೊನೆಗೆ ಜೀವಿಗಳ ಜೀವ-ದೇಹಗಳ ತಿಂದು
ಭೂಮಿ ಬದುಕುತ್ತಿದೆ ಅಂತ………..||?
ಎಲ್ಲರಿಗೂ ಒಂದೇ ತತ್ವ-ಸಿದ್ಧಾಂತ ಸೂತ್ರ |
ಜೀವ ಕೊಟ್ಟು ಜೀವ ತೆಗೆಯುವುದು……..|
ಒಂದನ್ನು ತಿಂದು ಒಂದು ಬದುಕುವುದು……|
ನಂಬಿಸಿ ಕತ್ತು ಕೊಯ್ಯುವ ಕಾರ್ಯ ವೈಖರಿ |
ಅದುವೇ ಈ ಸೃಷ್ಟಿಯ ಚಲನಕ್ಕಾಧಾರ
ನಿಸರ್ಗ ಒದಗಿಸಿದ ಚೈತನ್ಯ ಸೂತ್ರಧಾರ……….|
ಅದರ ಮಧ್ಯ,
ನಾವುಳಿಸಿ ಹೋಗಬೇಕಾಗಿರುವುದು ಮಾತ್ರ
ಮಾನವತೆಯ ಸಂಸ್ಕಾರ………………………|||
*****