ಹನಿಕವನಗಳು
-ಪ್ರಕಾಶ್ ಮಲ್ಕಿ ಒಡೆಯರ್
ಹೂವಿನಹಡಗಲಿ
ನಾಲಿಗೆ
**”*****
ಹರಿವ ನೀರ ತೊರೆ
ನನ್ನ ನಾಲಿಗೆ;
ನಿನ್ನಂದ
ನೋಡಿದ ತಪ್ಪಿಗೆ!
ದರ್ಬಾರು
**”*****
ಬಹುತೇಕ
ಗ್ರಾಮ ಪಂಚಾಯಿತಿ ಗಳಲ್ಲಿ
ಹೆಣ್ಣಿಗೆ”ಅಧ್ಯಕ್ಷ ಪಟ್ಟ”
ಒಲಿದರೆ
ಗಂಡನದೇ ದರ್ಬಾರು;
ಮುಖ್ಯ ಮಂತ್ರಿಯ
ಮಗ
ಅಧಿಕಾರ ನಡೆಸಲು
ಶಾಸಕರ ತಕರಾರು.!
ರೂಪ
********”*
ರೂಪ-ಕುರೂಪ
ದ್ವಂದ್ವ ವನ್ನು
ಸಮಾನವಾಗಿ
ತೋರಿ ಸಮತೆ ಸಾರುವ
“ನೆರಳು”
ನನ್ನ ಪ್ರಕಾರ
ದೇವರ ರೂಪ!
ಕಣ್ಣುರಿ
****”*
ತನ್ನ ಮನೆಯಾಕೆಯೇ
ಸುಂದರಿ
ಎಂದು ಕೊಂಡವನಿಗೆ
ಪಕ್ಕದ
ಮನೆಯಾಕೆಯನ್ನು
ಕಂಡು
ಅದೇಕೋ ಕಣ್ಣುರಿ!
ಮತ್ತೇನು
********
ಸಂಭವಾಮಿ ಯುಘೇ ಯುಘೇ
ಇದು ಶ್ರೀಕೃಷ್ಣ ಉವಾಚ
ವಿಶ್ವವ್ಯಾಪಿ ಹರಡಿರುವ
ಕರೋನಾ ಮತ್ತೇನು
ಇದು ನನ್ನ ಉವಾಚ!
******