ಹನಿಗವನಗಳು*
***************
( 1)
*ಸಿಹಿಮಾತು*
——————–
ಎಳ್ಳು – ಬೆಲ್ಲವ ಹಂಚಿ
ಒಳ್ಳೆಯ ಮಾತುಗಳನ್ನಾಡೋಣ
ಸಾರ್ವಕಾಲಿಕ ನುಡಿ ;
ನಿತ್ಯ – ನಿರಂತರ
ಒಳ್ಳೆಯದನ್ನೇ
ಬಯಸೋಣ, ಮಾತನಾಡೋಣ
ಸಣ್ಣ ತಿದ್ದುಪಡಿ.
(2)
*ಕರೆ*
******
ಕೃಷ್ಣನ ಕೊಳಲಿನ
ಕರೆಗೆ ಗೋವುಗಳು
ತಲೆದೂಗಿ ಬಂದಂತೆ ;
ನಿನ್ನೀ ಕಣ್ಣಿನ
ಕರೆಗೆ
ಬಾರದೇ ಇರಲಾದೀತೆ.
(3)
*ಮಳೆ*
******
ಹೊರಗೆ ಸುರಿಯುತ್ತಿದೆ
ಸಂಜೆಯ ಮಳೆ
ಧೋ…….ಎಂದು ;
ನೀನಿಲ್ಲದ ನೆನಪು
ತಂಪಲ್ಲೂ ಬೆವರಿದ
ಅನುಭವ ಇಂದು.
(4)
*ಸಿಹಿ – ಕಹಿ*
***********
ಬೆಲ್ಲದ ಸಿಹಿ
ಯಾರಿಗೂ ಇಷ್ಟ
ಬೇವು ಸವಿಯೋದು,
ಸಹಿಸೋದು ಕಷ್ಟ ;
ದಾಂಪತ್ಯದಲ್ಲಿ ಸಿಹಿ – ಕಹಿ
ಎರಡನ್ನೂ
ಸಮನಾಗಿ ಸವಿದಾಗ
ಜೀವನವೇ ಉತ್ಕೃಷ್ಟ.
(5)
……..ಬಂತು !?
************
ಹಸಿವಾದಾಗ
ಅನ್ನ ನೀಡದಿದ್ದ ಮೇಲೆ
ಮೃಷ್ಟಾನ್ನ
ನೀಡಿದರೇನು ಬಂತು…?
ಸಂಬಂಧಗಳು
ಹಳಸಿದಮೇಲೆ
ಪ್ರೀತಿಯ ಧಾರೆ
ಸುರಿದರೇನು ಬಂತು….?
-ಶೋಭಾ ಮಲ್ಕಿ ಒಡೆಯರ್
*ಹೂವಿನ ಹಡಗಲಿ*