ಕೂಡ್ಲಿಗಿ: ಕೂಡ್ಲಿಗಿಯ ನೂತನ ಸಿಪಿಐಯಾಗಿ ವಸಂತ.ವಿ.ಆಸೋದೆ ಶನಿವಾರ ಸಂಜೆ ಅಧಿಕಾರ ವಹಿಸಿಕೊಂಡರು. ಹೊಸಪೇಟೆ ಲೋಕಾಯುಕ್ತ ಕಚೇರಿಯಲ್ಲಿ ಸಿಪಿಐಯಾಗಿ ಸೇವೆ ಸಲ್ಲಿಸುತ್ತಿದ್ದ ವಸಂತ ಆಸೋದೆ ಅವರನ್ನು ಸರ್ಕಾರ ಕೂಡ್ಲಿಗಿ ಸಿಪಿಐಯಾಗಿ ವರ್ಗಾಯಿಸಿ ಆದೇಶ ಹೊರಡಿಸಿತ್ತು.
ಶನಿವಾರ ನಿಯಮದಂತೆ ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ, ಜಿಲ್ಲಾ ಎಸ್ಪಿ ಸೈದುಲು ಅವರನ್ನು ಭೇಟಿ ಮಾಡಿ ಮಾರ್ಗದರ್ಶನ ಪಡೆದು ಬಳಿಕ ಪಟ್ಟಣಕ್ಕೆ ಆಗಮಿಸಿ ಅಧಿಕಾರವಹಿಸಿಕೊಂಡರು.
ಸಿಪಿಐ ಪಂಪನಗೌಡ ಅವರನ್ನು ಲೋಕಾಯುಕ್ತಕ್ಕೆ ವರ್ಗಮಾಡಿದ್ದು ಸ್ಥಳ ನಿಗದಿಗೊಳಿಸಿಲ್ಲವೆಂದು ತಿಳಿದು ಬಂದಿದೆ.
ಡಿವೈ.ಎಸ್.ಪಿಯಾಗಿ ಶೀಘ್ರ ಭಡ್ತಿ ದೊರೆಯಲಿದ್ದು, ಆದೇಶದ ನಿರೀಕ್ಷೆಯಲ್ಲಿ ಪಂಪನಗೌಡರು ಇದ್ದಾರೆ.
ನೂತನ ಪಿಐ ವಸಂತ ವಿ ಆಸೋದೆಗೆ ಪಂಪನಗೌಡ ಅಧಿಕಾರ ಹಸ್ತಾಂತರಿಸಿದರು. ಬಳಿಕ ನೂತನ ಹಾಗೂ ವರ್ಗಾವಣೆಗೊಂಡ ಸಿಪಿಐ ಇಬ್ಬರಿಗೂ ಅಧಿಕಾರಿ ವರ್ಗ, ಸಿಬ್ಬಂದಿ ಹಾಗೂ ಪಟ್ಟಣದ ಸಂಘ ಸಂಸ್ಥೆ ಮುಖಂಡರು ಶುಭಕೋರಿದರು.
*****