ಚನ್ನಪಟ್ಟಣ(ರಾಮನಗರ ಜಿಲ್ಲೆ): ಬಡತನದ ವಿರುದ್ಧ ಹೋರಾಟ ನಡೆಸಿ ಯಶಸ್ವಿಯಾದ ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆ ಅವರ ಬದುಕು ಯುವ ಸಮೂಹಕ್ಕೆ ಮಾದರಿ ಎಂದು ರಾಜ್ಯ ವಿಶ್ರಾಂತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ಸುಭಾಷ್ ಭರಣಿ ಅವರು ಹೇಳಿದರು.
ಸ್ಥಳೀಯ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನ ಆವರಣದಲ್ಲಿರುವ ಶತ ಮಾನೋತ್ಸವ ಭವನದಲ್ಲಿ ಹಿರಿಯ ವಿಚಾರವಾದಿ, ಸಾಹಿತಿ ಡಾ.ವೆಂಕಟಯ್ಯ ಅಪ್ಪಗೆರೆಯವರ ‘ದಣಿವರಿಯದ ಪಯಣ’ ಅನುಭವ ಕಥನ ಲೊಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜೀವನದಲ್ಲಿ ಸಾಧಿಸಬೇಕೆಂಬ ಛಲವಿದ್ದರೆ ಬಡತನ, ಜಾತಿ ಯಾವುದೂ ಅಡ್ಡಿಬರದು ಎಂಬುದಕ್ಕೆ ಡಾ. ಅಪ್ಪಗೆರೆ ಅವರೇ ಸಾಕ್ಷಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಪ್ಪಗೆರೆ ಎಂಬ ಊರೇ ವಿಶೇಷವಾದದು, ಇಲ್ಲಿ ಹುಟ್ಟಿದವರು ಅನೇಕರು ರಾಷ್ಟ್ರ, ಅಂತರರಾಷ್ಟೀಯ ಮಟ್ಟ ದಲ್ಲಿ ಖ್ಯಾತಿಗೆ ಭಾಜನರಾಗಿದ್ದಾರೆ ಎಂದರು.
ಮೈಸೂರು ಕರ್ನಾಟಕದ ಸರಕಾರಿ ನೌಕರರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೌಕರಿ ಮಾಡುವುದನ್ನು ಕಾಲಪಾನಿ ಶಿಕ್ಷೆ ಎನ್ನುವಂತೆ ವರ್ತಿಸುತ್ತಾರೆ ಹಾಸ್ಯಮಿಶ್ರಿತವಾಗಿ ಹೇಳಿದ ಡಾ. ಭರಣಿ ಅವರು, ಡಾ. ವೆಂಕಟಯ್ಯ ಅವರು ಮೂರೂವರೆ ದಶಕಗಳ ಕಾಲ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿ, ಬರಹಗಾರರಾಗಿ ಸಾರ್ಥಕ ಜೀವನ ನಡೆಸಿದ್ದಾರೆ ಎಂದರು.
ವೈಚಾರಿಕ ಲೇಖನಗಳು ಹಾಗೂ ಇತರೆ ಸಾಹಿತ್ಯ ಪ್ರಕಾರಗಳಲ್ಲಿ ಗುರುತಿ ಸಿಕೊಂಡಿದ್ದ ವೆಂಕಟಯ್ಯ ಅಪ್ಪಗೆರೆ, ಜೀವನ ಚಿತ್ರಣ, ಜೀವನ ಚರಿತ್ರೆ ಎಂಬ ಪ್ರಕಾರಗಳಿಗೂ ಭಿನ್ನವಾದ ಅನುಭವ ಕಥನವನ್ನು ಕಟ್ಟಿಕೊಟ್ಟಿದ್ದಾರೆ. ಇದು ಹಲವು ಹತ್ತು ರೀತಿಯಲ್ಲಿ ವಿಶೇಷವಾದದ್ದು, ಈ ಪುಸ್ತಕವನ್ನು ಎಲ್ಲರೂ ಕೊಂಡು ಓದಬೇಕು ಎಂದು ಹೇಳಿದರು.
ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಬದುಕು ಹೋರಾಟ ಶೋಷಿತ, ತಳಸಮುದಾಯದ ಯುವಕರಿಗೆ ಆದರ್ಶವಾಗಬೇಕು ಎಂದು ತಿಳಿಸಿದರು.
ಕೃತಿ ಲೋಕಾರ್ಪಣೆ: ಕೃತಿ ಬಿಡುಗಡೆಯನ್ನು ವಿಶಿಷ್ಟವಾಗಿ ನೆರವೇರಿಸಲಾಯಿತು. ಪುಸ್ತಕಗಳನ್ನು ಬಿದಿರು ಬುಟ್ಟಿಯಲ್ಲಿ ಹೂವುಗಳು ಹಾಗೂ ಆಕರ್ಷಕ ಹೊಸ ಬಟ್ಟೆಯಿಂದ ಮುಚ್ಚಿ, ಯುವತಿಯೊಬ್ಬಳು ಹೊರಗಡೆಯಿಂದ ಹೊತ್ತು ತಂದು ಲೋಕಾ ರ್ಪಣೆಗೆ ಡಾ. ಭರಣಿ ಅವರಿಗೆ ನೀಡಿದ್ದು ಗಮನ ಸೆಳೆಯಿತು.
ಭರಣಿ ಅವರು ಹೂಗಳಿಂದ ಮುಚ್ಚಿದ್ದ ಪುಸ್ತಕಗಳನ್ನು ಹೊರತೆಗೆದು ಲೋಕಾರ್ಪಣೆ ಗೊಳಿಸಿದ ರೀತಿ ಕೂಡ ವಿಭಿನ್ನ ವಾಗಿತ್ತು.
ಪುಸ್ತಕ ಕುರಿತು ಮಾತನಾಡಿದ ಬೆಂಗಳೂರು ಮಲ್ಲೇಶ್ವರಂ ಎಂಇಎಸ್ ಕಾಲೇಜಿನ ಉಪನ್ಯಾಸಕ ಡಾ.ರವಿ ಅಪ್ಪಗೆರೆ ಅವರು, ಜೀವನ ಚಿತ್ರಣದ ಅನೇಕ ಪ್ರಯೋಗಗಳ ಮಜಲನ್ನು ಮೀರಿ ಈ ಕೃತಿ ಅನಾವರಣಗೊಂಡಿದೆ, ಕಟ್ಟಿಕೊಟ್ಟಿರುವ ವಿವಿಧ ವಿಷಯಗಳು ವಿಭಿನ್ನ ರೀತಿಯಲ್ಲಿ ಕಥೆ ಯಾಗುತ್ತಾ ಹೋಗುತ್ತವೆ. ಅದರಲ್ಲಿ ಅಷ್ಟೊಂದು ಕಥೆಗಳು ಅಡಗಿ ಕುಳಿತಿವೆ.
ಹೇಳುವ ವಿಚಾರಗಳು ತಮ್ಮ ನಡುವೆಯೇ ನಡೆ ದಂತಹವುಗಳು ಎಂದು ಕಟ್ಟಿಕೊಡುವ ಒಂದು ಪ್ರಯತ್ನಗಳಾಗಿವೆ, ಇಲ್ಲಿ ಅವರೊಡನೆ ಇದ್ದ ಸಾವಿರಾರು ವಿಚಾರಗಳು ಅನಾವರಣಗೊಂಡಿವೆ ಎಂದರು.
ಮುಖ್ಯ ಅತಿಥಿ ಬೆಂಗಳೂರು ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎನ್ ಜಯಪ್ಪ ಅವರು, ಈ ಕೃತಿಯ ಮುನ್ನಡಿ ಯನ್ನು ಬರೆಯ ಬೇಕು ಎಂದು ಕೃತಿಕಾರ ಸ್ನೇಹಿತ ಡಾ.ವೆಂಕಟಯ್ಯ ಹೇಳಿದ್ದರು, ಈ ಕೊರೊನಾ ಕಾಟದಿಂದ ಕಳೆದ ಹಲವು ತಿಂಗಳಿಂದ ನಾನು ಮನೆಯ ಹೊರಗೇ ಬರಲಿಲ್ಲ. ಆ ಅದೃಷ್ಟ ತಪ್ಪಿತು, ಈ ಕಾರ್ಯುಕ್ರಮಕ್ಕೆ ಬಂದಿರುವುದು ಸಾರ್ಥಕವಾ ಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ ನಾಗರಾಜ್ ಮಾತ ನಾಡಿ, ಡಾ.ವೆಂಕಟಯ್ಯ ಸೂಕ್ಷ್ಮ ಮನಃಸ್ಥಿತಿಯವರು, ಅವರ ಜತೆ ನಡೆದ ಮಾತು ಕಥೆಗಳೇ ನನಗೆ ಹಲವು ಅನುಭವ ತಂದುಕೊಟ್ಟಿವೆ ಎಂದರು.
ಡಾ. ಅಪ್ಪಗೆರೆ ಅವರನ್ನು ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ನನ್ನಾಸೆ ಈಡೇರಲಿಲ್ಲ ಎಂದು ನೊಂದು ಕೊಂಡರು.
ಮುಂದೆ ಆಯ್ಕೆಯಾಗುವ ಕಸಾಪ ಅಧ್ಯಕ್ಷರ ಮನ ಒಲಿಸಿ ಜಿಲ್ಲಾ ಕನ್ನಡ ಸಮ್ಮೇಳನ ಅಧ್ಯಕ್ಷರನ್ನಾಗಿಸಲು ಶ್ರಮಿಸುವೆ ಎಂದು ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪ್ರತಕರ್ತ ಸು.ತ ರಾಮೇಗೌಡ ಅವರು ಮಾತನಾಡಿ, ಡಾ.ವೆಂಕಟಯ್ಯ ಅವರನ್ನು ನಾನು ವಿದ್ಯಾರ್ಥಿ ದೆಸೆಯಿಂದಲೂ ಗಮನಿಸಿದ್ದೇನೆ. ಎಲ್ಲವನ್ನೂ ವೈಜ್ಞಾನಿಕ ಹಾಗೂ ವೈಚಾರಿಕವಾಗಿ ಆಲೋಚಿಸುವ ವ್ಯಕ್ತಿ .
ಸಮಾಜಕ್ಕೆ ಚಿಕಿತ್ಸಕ ರೀತಿಯಲ್ಲಿ ಬರವಣಿಗೆಯನ್ನು ಕೊಡಬೇಕು ಎಂಬ ಮನಃ ಸ್ಥಿತಿಯಂತೆ ಉತ್ತಮ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.
ವೇದಿಕೆಯಲ್ಲಿ ವೆಂಕಟಯ್ಯ ಅವರ ಬಾಲ್ಯ ಸ್ನೇಹಿತರಾದ ಗವಿಯಯ್ಯ, ಕೆಂಪರಾಜು, ದಲಿತ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ವಿಶ್ವಪ್ರಿಯ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಚಂದ್ರು ಸಾಖ್ಯವಂಶಿ ಅವರು ಸ್ವಾಗತಿಸಿದರು.
ಕೃತಿಕಾರ ಡಾ.ಅಪ್ಪಗೆರೆ ವೆಂಕಟಯ್ಯ ಅವರು ವಂದನೆ ಸಲ್ಲಿಸಿದರು.ಆನಂದ್ ಅವರು ನಿರೂಪಿಸಿದರು.
ಗೀತ ಗಾಯನ: ಚಂದ್ರುಸಾಖ್ಯವಂಶಿ ಹಾಗೂ ಚೌಪು ಸ್ವಾಮಿ ಗೀತ ಗಾಯನ ನಡೆಸಿಕೊಟ್ಟರು.
*****