ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ. ಬಸವರಾಜ ಡೋಣುರ ನೇಮಕ

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ. ಬಸವರಾಜ ಡೋಣುರ ನೇಮಕವಾಗಿದ್ದಾರೆ.
ಕಾರ್ಯ, ನಾವು ಮಾಡುವ ಶ್ರದ್ಧೆಯ ಕೆಲಸ ಮಾತಾಡಬೇಕು ಎನ್ನುವ ಮಾತಿನ ಜೊತೆಗೆ ಎಂದಿಗೂ ಜೀವನೋತ್ಸಾಹ ಕಳೆದುಕೊಳ್ಳದೆ ನಿರಂತರ ಜೀವನ ಪ್ರೀತಿ ಇಟ್ಟುಕೊಂಡು ವಿದ್ಯಾರ್ಥಿಗಳ ನೆಚ್ಚಿನ ಗುರುಗಳು ಡಾ. ಡೋಣುರ ಅವರು.
ನಾಡಿನ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಎಲ್ಲರ ಪ್ರಿಯರಾದ ಡಾ.ಬಸವರಾಜ ಡೋಣುರ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿರುವುದು ಶಿಕ್ಷಣ ಪ್ರೇಮಿಗಳೆಲ್ಲಾ ಸಂತೋಷವಾಗಿದೆ.
ಈ ಮೊದಲು ಇದೇ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಸಾತಿಹಾಳ ಗ್ರಾಮದ ಡೋಣುರ ಅವರು ಸದುವಿನಯದ ವ್ಯಕ್ತಿತ್ವ ಉಳ್ಳವರು. ಇವರ ಸಾಧನೆಗೆ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ‘ಅಮ್ಮ’ ಗೌರವ ಪುರಸ್ಕಾರ ಲಭಿಸಿದೆ.
ಅಧ್ಯಯನ ಮತ್ತು ಬರವಣಿಗೆಯ ಮೂಲಕ ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತಿಕವಾಗಿ ಹೆಸರುವಾಸಿಯಾದ ಡಾ.ಬಸವರಾಜ ಡೋಣುರ ಅವರ ಬದುಕು ಹೀಗೆ ಸಾಗಲಿ ಎನ್ನುವ ಸದಾಭಿಲಾಶೆಯೊಂದಿಗೆ, ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್
ಅಭಿನಂದಿಸುತ್ತದೆ.
(ವರದಿ:ವಿಜಯಭಾಸ್ಕರ)
*****